ಉಪ್ಪಿನಂಗಡಿ: ಘಟಕ ಅಭಿವೃದ್ಧಿ ತರಬೇತಿ (LDMT) ಕಾರ್ಯಕ್ರಮ

ಉಪ್ಪಿನಂಗಡಿ: ಘಟಕ ಅಭಿವೃದ್ಧಿ ತರಬೇತಿ (LDMT) ಕಾರ್ಯಕ್ರಮ

ಉಪ್ಪಿನಂಗಡಿ:ಜೆಸಿಐ ಉಪ್ಪಿನಂಗಡಿ ಘಟಕದಲ್ಲಿ 2024ನೇ ಸಾಲಿನ ಘಟಕ ಅಭಿವೃದ್ಧಿ ತರಬೇತಿ (LDMT) ಕಾರ್ಯಕ್ರಮವು ಸಮುದಾಯ ಆರೋಗ್ಯ ಕೇಂದ್ರ ಉಪ್ಪಿನಂಗಡಿಯಲ್ಲಿ ನಡೆಯಿತು.

ಜೇಸಿಐ ವಲಯ15ರ ಪ್ರಾಂತ್ಯ ಬಿ ಉಪಾಧ್ಯಕ್ಷರಾದ JFM ಶಂಕರ್ ರಾವ್ ತರಬೇತಿ ನೀಡಿ, ಘಟಕದಲ್ಲಿ ಆಡಳಿತ ಮಂಡಳಿ ಸದಸ್ಯರ ಕಾರ್ಯಗಳು,ಘಟಕದ ನಿರ್ವಹಣೆ ಮತ್ತು ಅಭಿವೃದ್ಧಿ, ಸದಸ್ಯರ ಜವಾಬ್ದಾರಿಗಳು, ಘಟಕದ ನಡೆಸ ಬೇಕಾದ ಕಾರ್ಯಕ್ರಮಗಳ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ನೂತನ ಸದಸ್ಯರಾಗಿ ಸುಜಿತ್ ಪೆರ್ನೆ ಪ್ರಮಾಣ ವಚನ ಸ್ವೀಕರಿಸಿ, ಜೇಸಿ ಘಟಕಕ್ಕೆ ಸೇರ್ಪಡೆಗೊಂಡರು. ಘಟಕದ ವತಿಯಿಂದ ವಲಯ ಉಪಾಧ್ಯಕ್ಷರಾದ ಶಂಕರ್ ರಾವ್.ಬಿ ಇವರಿಗೆ ಘಟಕದ ಪೂರ್ವಾಧ್ಯಕ್ಷರಾದ ಜೇಸಿ ಡಾ.ಗೋವಿಂದ ಪ್ರಸಾದ್ ಕಜೆ, ರೋಟರಿ ಕ್ಲಬ್ ಅಧ್ಯಕ್ಷರಾದ ಶ್ರೀಮತಿ ಅನುರಾಧ ಶೆಟ್ಟಿ ಮತ್ತು ಬರೋಡ ಬ್ಯಾಂಕ್ ನ ಶಾಖಾ ವ್ಯವಸ್ಥಾಪಕ ವಿಶ್ರುತ್ ಕುಮಾರ್ ಗೌರವಾರ್ಪಣೆಯನ್ನು ನಡೆಸಿಕೊಟ್ಟರು.

ಸಭೆಯ ಅಧ್ಯಕ್ಷತೆಯನ್ನು ಜೇಸಿ ಲವೀನಾ ಪಿಂಟೊ ಇವರು ವಹಿಸಿದ್ದರು. ನಿಕಟಪೂರ್ವ ಅಧ್ಯಕ್ಷರಾದ ಜೇಸಿ ಶೇಖರ್ ಗೌಂಡತ್ತಿಗೆ, ಉಪ್ಪಿನಂಗಡಿ ಜೇಸಿ ಟ್ರಸ್ಟ್ ಅಧ್ಯಕ್ಷ ಜೇಸಿ ಪ್ರಶಾಂತ್ ಕುಮಾರ್ ರೈ, ಪೂರ್ವಾಧ್ಯಕ್ಷರಾದ ಜೇಸಿ ಕೆ.ವಿ.ಕುಲಾಲ್, ಜೇಸಿ ಆನಂದ ರಾಮಕುಂಜ, ಜೇಸೀ ಮೋಹನ್ ಚಂದ್ರ ತೋಟದಮನೆ, ಕಾರ್ಯದರ್ಶಿ ಸುರೇಶ್, ಜೇಸೀ ದಿವಾಕರ, ಉಪಸ್ಥಿತರಿದ್ದರು.

Leave a Reply

You May Have Missed

error: Content is protected !!