ಮಾ.07ರಂದು ಉಳಿತೊಟ್ಟಿನಲ್ಲಿ ಸ್ವಲಾತ್ ವಾರ್ಷಿಕೋತ್ಸವ ಹಾಗು ಮದನೀಯಂ ಆತ್ಮೀಯ ಮಜ್ಲಿಸ್ ಕಾರ್ಯಕ್ರಮ

ಮಾ.07ರಂದು ಉಳಿತೊಟ್ಟಿನಲ್ಲಿ ಸ್ವಲಾತ್ ವಾರ್ಷಿಕೋತ್ಸವ ಹಾಗು ಮದನೀಯಂ ಆತ್ಮೀಯ ಮಜ್ಲಿಸ್ ಕಾರ್ಯಕ್ರಮ

ನೆಲ್ಯಾಡಿ ಇಲ್ಲಿನ ಉಳಿತೊಟ್ಟು ಬಿಲಾಲ್ ಜುಮ್ಮಾ ಮಸ್ಜಿದ್ ಇದರ ವತಿಯಿಂದ ವಾರ್ಷಿಕ ಸ್ವಲಾತ್ ಕಾರ್ಯಕ್ರಮ ಹಾಗು ಮದನೀಯಂ ಆತ್ಮೀಯ ಮಜ್ಲಿಸ್ ಕಾರ್ಯಕ್ರಮ ಮಾರ್ಚ್ 07 ಗುರುವಾರದಂದು ಉಳಿತೊಟ್ಟು ಬಿಲಾಲ್ ಜುಮ್ಮಾ ಮಸ್ಜಿದ್ ವಠಾರದಲ್ಲಿ ನಡೆಯಲಿದೆ.

ಸ್ವಲಾತ್ ಮಜ್ಲಿಸ್ ಅಸರ್ ನಮಾಝ್ ಬಳಿಕ ಅಸ್ಸಯ್ಯದ್ ಶಿಹಾಬುದ್ದೀನ್ ತಂಙಲ್ ಮದಕರವರ ನೇತೃತ್ವದಲ್ಲಿ ನಡೆಯಲಿದೆ. ಮಸೀದಿ ಅಧ್ಯಕ್ಷರಾದ ಜನಾಬ್ ಶರೀಫ್ ತಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಉಳಿತೊಟ್ಟು ಜಮಾಅತ್ ಹಾಗು ಉಡುಪಿ ಹಾಸನ ಜಿಲ್ಲೆಯ ಗೌರವಾನ್ವಿತ ಖಾಝಿಗಳಾದ ಬಹು ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ರವರು ಕಾರ್ಯಕ್ರಮವನ್ನು ಉಧ್ಘಾಟಿಸಲಿದ್ದಾರೆ. ಉಳಿತೊಟ್ಟು ಜಮಾಅತ್ ಖತೀಬ್ ಉಸ್ತಾದ್ ಬಹು ಅಬೂಬಕರ್ ಝುಹುರಿ ಅಲ್ ಫುರ್ಖಾನಿಯವರು ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ.

ಮಗ್ರಿಬ್ ನಮಾಝ್ ಬಳಿಕ ಅಧ್ಯಾತ್ಮಿಕ ಮದನೀಯಂ ಆತ್ಮೀಯ ಮಜ್ಲಿಸ್ ಕಾರ್ಯಕ್ರಮ ಬಹು ಅಬ್ದುಲ್ ಲತೀಫ್ ಸಖಾಫಿ ಕಾಂತಪುರಂ ಉಸ್ತಾದರ ನೇತೃತ್ವದಲ್ಲಿ ಹಲವಾರು ಉಲಮಾ ಉಮಾರಾ ನೇತಾರರ ಭಾಗವಹಿಸುವಿಕೆಯಲ್ಲಿ ನಡೆಯಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಜಮಾಅತ್ ಕಾರ್ಯದರ್ಶಿ ರಸೂಲ್ ಸಾಹೇಬ್ ತಿಳಿಸಿದ್ದಾರೆ.

Leave a Reply

You May Have Missed

error: Content is protected !!