ಜೆಸಿಐ ಪಂಜ ಪಂಚಶ್ರೀ ಹಾಗೂ ಕೆ.ವಿ.ಜಿ ದಂತ ಮಹಾವಿದ್ಯಾಲಯದ ವತಿಯಿಂದ ಮಕ್ಕಳ ದಂತ ಚಿಕಿತ್ಸಾ ಶಿಬಿರ

ಜೆಸಿಐ ಪಂಜ ಪಂಚಶ್ರೀ ಹಾಗೂ ಕೆ.ವಿ.ಜಿ ದಂತ ಮಹಾವಿದ್ಯಾಲಯದ ವತಿಯಿಂದ ಮಕ್ಕಳ ದಂತ ಚಿಕಿತ್ಸಾ ಶಿಬಿರ

ಜೇಸಿಯ ಪಂಜ ಪಂಚಶ್ರೀ ಹಾಗೂ ಕೆ.ವಿ.ಜಿ ದಂತ ಮಹಾವಿದ್ಯಾಲಯದ ವತಿಯಿಂದ ಮಕ್ಕಳ ದಂತ ಚಿಕಿತ್ಸಾ ಶಿಬಿರ ಪಂಜ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿತು.ಎಸ್.ಡಿ.ಎಂ.ಸಿ ಅಧ್ಯಕ್ಷ ಸೋಮಶೇಖರ ನೇರಳ ದೀಪ ಬೆಳಗಿಸಿ ಶಿಬಿರ ಉದ್ಘಾಟಿಸಿ ‘ಸೌಂದರ್ಯ ವರ್ಧಕ ಹಾಗೂ ಆರೋಗ್ಯಕ್ಕೆ ಪೂರಕವಾಗಿರುವ ಹಲ್ಲಿನ ಕುರಿತಾಗಿ ವಿದ್ಯಾರ್ಥಿಗಳಲ್ಲಿ ಅರಿವು ಹಾಗೂ ಕಾಳಜಿ ಅಗತ್ಯ’ಎಂದರು.

ಕೆ.ವಿ.ಜಿ ದಂತ ಮಹಾವಿದ್ಯಾಲಯದ ವೈದ್ಯರಾದ ಡಾ.ಅಲ್ವಿನ್ ಶಿಬಿರದ ಮಹತ್ವ ಹಾಗೂ ಕಾರ್ಯವಿಧಾನವನ್ನು ವಿವರಿಸಿದರು. ಡಾ.ಅಮೋಘ, ಶಾಲೆಯ ಮುಖ್ಯ ಶಿಕ್ಷಕಿ ಲೀಲಾ ಕುಮಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜೆಸಿಐ ಅಧ್ಯಕ್ಷ ಜೀವನ್ ಮಲ್ಕಜೆ ಅಧ್ಯಕ್ಷತೆ ವಹಿಸಿದ್ದರು. ಶಿವಪ್ರಸಾದ್ ಹಾಲೆಮಜಲು ವೇದಿಕೆಗೆ ಆಹ್ವಾನಿಸಿದರು. ನಾಗ್ಮಣಿ ಕೆದಿಲ ಜೇಸಿ ವಾಣಿ ವಾಚಿಸಿದರು. ಕಾರ್ಯದರ್ಶಿ ಜೀವನ್ ಶೆಟ್ಟಿಗದ್ದೆ ವಂದಿಸಿದರು.

Previous post

ಮಾ.8: ಪಡುಬೆಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ, ರಂಗಪೂಜೆ, ದೈವಗಳ ನೇಮೋತ್ಸವ -ಶ್ರೀ ವಿಷ್ಣುಮೂರ್ತಿ ಮಹಾದ್ವಾರದ ಲೋಕಾರ್ಪಣೆ

Next post

ಶ್ರೀ ಕ್ಷೇತ್ರ ದೆಯ್ಯರ ಮಜಲು ದೈವಗಿರಿ ಬೊಣ್ಯಸಾಗು ನಲ್ಲಿ ಶ್ರೀ ರಾಜನ್ ದೈವ ಹಾಗೂ ಪರಿವಾರ ದೈವಗಳ ಪ್ರತಿಷ್ಠಾ ಕಲಶಾಭಿಷೇಕ ಹಾಗೂ ನೇಮೋತ್ಸವ

Leave a Reply

You May Have Missed

error: Content is protected !!