ಉಪ್ಪಿನಂಗಡಿ: ಜೇಸಿಐ ವತಿಯಿಂದ “ಪರೀಕ್ಷೆ ಹಬ್ಬ” ತರಬೇತಿ ಕಾರ್ಯಾಗಾರ

ಉಪ್ಪಿನಂಗಡಿ: ಜೇಸಿಐ ವತಿಯಿಂದ “ಪರೀಕ್ಷೆ ಹಬ್ಬ” ತರಬೇತಿ ಕಾರ್ಯಾಗಾರ

ಉಪ್ಪಿನಂಗಡಿ: ಜೇಸಿಐ ಸಂಸ್ಥೆಯ ಪೇರಣಾ ಕಾರ್ಯಕ್ರಮದಡಿಯಲ್ಲಿ ಸರಕಾರಿ ಪ್ರೌಢಶಾಲೆ, ಬುಳೇರಿಮೊಗ್ರುನಲ್ಲಿ “ಪರೀಕ್ಷಾ ಹಬ್ಬ” ತರಬೇತಿ ಕಾರ್ಯಕ್ರಮವು ನಡೆಯಿತು.

ಶಾಲಾ ಮುಖ್ಯೋಪಾಧ್ಯಾಯರಾದ ಕರುಣಾಕರ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ತರಬೇತಿಯನ್ನು ಜೇಸಿಐ ಭಾರತದ ವಲಯ ಹದಿನೈದರ ಪೂರ್ವ ವಲಯ ಉಪಾಧ್ಯಕ್ಷರಾದ ಹಾಗೂ ವಲಯ ತರಬೇತುದಾರರಾದ ಜೇಸಿ ಪ್ರದೀಪ್ ಬಾಕಿಲರವರು ನಡೆಸಿಕೊಟ್ಟರು. ಅಧ್ಯಕ್ಷತೆಯನ್ನು ಜೇಸಿಐ ಉಪ್ಪಿನಂಗಡಿ ಘಟಕದ ಅಧ್ಯಕ್ಷರಾದ ಜೇಸಿ ಲವೀನಾ ಪಿಂಟೊ ವಹಿಸಿದ್ದರು. ಕುಮಾರಿ ಧೃತಿ ಜೇಸಿವಾಣಿ ವಾಚಿಸಿದರು. ಶಾಲಾ ಕನ್ನಡ ಶಿಕ್ಷಕರಾದ ಧನಂಜಯ.ಪಿ ರವರು ವಂದಿಸಿದರು. ವಿದ್ಯಾರ್ಥಿನಿ ನೌಶಿರ ತರಬೇತಿ ಕುರಿತು ಅನಿಸಿಕೆ ವ್ಯಕ್ತಪಡಿಸಿದರು.

ಜೇಸಿಐ ಭಾರತದ ವಲಯ ಹದಿನೈದರ ಪೂರ್ವ ವಲಯ ಉಪಾಧ್ಯಕ್ಷರುಗಳಾದ ಜೇಸಿ ಡಾ| ಗೋವಿಂದ ಪ್ರಸಾದ್ ಕಜೆ, ಜೇಸಿ ಪ್ರಶಾಂತ್ ಕುಮಾರ್ ರೈ ಉಪಸ್ಥಿತರಿದ್ದರು. ಶಾಲಾ ಶಿಕ್ಷಕವೃಂದ ಹಾಗೂ ವಿದ್ಯಾರ್ಥಿಗಳು ಸಹಕರಿಸಿದರು.

Leave a Reply

You May Have Missed

error: Content is protected !!