ದನ ಸಾಗಾಟದ ಕಾರು ಡಿಕ್ಕಿ-ರಸ್ತೆ ದಾಟುತ್ತಿದ್ದ ವ್ಯಕ್ತಿ ಮೃತ್ಯು

ದನ ಸಾಗಾಟದ ಕಾರು ಡಿಕ್ಕಿ-ರಸ್ತೆ ದಾಟುತ್ತಿದ್ದ ವ್ಯಕ್ತಿ ಮೃತ್ಯು

ಕಡಬ: ಮರ್ದಾಳದಲ್ಲಿ ದನ ಸಾಗಾಟದ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಮರ್ದಾಳ ನೆಕ್ಕಿತ್ತಡ್ಕ ಸಮೀಪದ ಅಚ್ಚಿಲಪಟ್ಟೆ ನಿವಾಸಿ ವಿಠಲ ರೈ(65ವ) ಮೃತಪಟ್ಟ ಘಟನೆ ಶನಿವಾರ ರಾತ್ರಿ ಸಂಭವಿಸಿದೆ.

ಮರ್ದಾಳ ಪೇಟೆಯಲ್ಲಿ ವಿಠಲ ರೈ ಯವರು ತನ್ನ ಕಾರನ್ನು ನಿಲ್ಲಿಸಿ ರಸ್ತೆ ದಾಟುತ್ತಿದ್ದ ವೇಳೆ ಸುಬ್ರಹ್ಮಣ್ಯ ಕಡೆಯಿಂದ ಬರುತ್ತಿದ್ದ ಕಾರು ಡಿಕ್ಕಿ ಹೊಡೆದು ಅವರು ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಅಪಘಾತ ಎಸಗಿ ಕಾರು ಪರಾರಿಯಾಗಿದ್ದು ನೆಕ್ಕಿತ್ತಡ್ಕ ಒಳ ರಸ್ತೆಯಲ್ಲಿ ಮನೆಯೊಂದರ ಬಳಿ ಪತ್ತೆಯಾಗಿದೆ.

ಕಾರಿನಲ್ಲಿದ್ದ ಜಾನುವಾರನ್ನು ಕಾರಿನಿಂದ ಕೆಳಗಿಳಿಸಿ ಕಟ್ಟಿ ಹಾಕಲಾಗಿದೆ. ಸ್ಥಳದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ಜಮಾಹಿಸಿದ್ದು ಅಪಘಾತ ಎಸಗಿದ ಆರೋಪಿಗಳನ್ನು ಬಂಧಿಸುವ ತನಕ ಮೃತದೇಹದ ಅಂತ್ಯ ಸಂಸ್ಕಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಹಿಂದೂ ಸಂಘಟನೆಯ ಪ್ರಮುಖರು ತಿಳಿಸಿದ್ದು, ಆಸ್ಪತ್ರೆ ಯ ಮುಂದೆ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಪೋಲಿಸರು ತೆರಳಿದ್ದು ತನಿಖೆ ನಡೆಸುತ್ತಿದ್ದಾರೆ.

Leave a Reply

You May Have Missed

error: Content is protected !!