ಜೆಡಿಎಸ್ ಮುಖಂಡ ಪ್ರವೀಣ್ ಮುಂಡೋಡಿ ಕಾಂಗ್ರೆಸ್ ಸೇರ್ಪಡೆ

ಜೆಡಿಎಸ್ ಮುಖಂಡ ಪ್ರವೀಣ್ ಮುಂಡೋಡಿ ಕಾಂಗ್ರೆಸ್ ಸೇರ್ಪಡೆ

ಸುಳ್ಯ: ಜೆಡಿಎಸ್ ಮುಖಂಡ ಪ್ರವೀಣ್ ಮುಂಡೋಡಿ ಗುರುವಾರ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.

ಪಂಜದಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್, ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ ಅವರು ಪಕ್ಷದ ಶಾಲು ಹೊದಿಸಿ ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿದರು. ಪ್ರವೀಣ್ ಮುಂಡೋಡಿ ದ.ಕ.ಜಿಲ್ಲಾ ಯುವ ಜೆಡಿಎಸ್ ಉಪಾಧ್ಯಕ್ಷ, ಸುಳ್ಯ ತಾಲೂಕು ಜೆಡಿಎಸ್ ಉಪಾಧ್ಯಕ್ಷರಾಗಿದ್ದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಸುಳ್ಯ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಮಮತಾ ಗಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ.ಶಹೀದ್ ತೆಕ್ಕಿಲ್, ಮುಖಂಡರಾದ ನಿತ್ಯಾನಂದ ಮುಂಡೋಡಿ,ಇಸಾಕ್ ಹಾಜಿ ಪಾಜಪಳ್ಳ, ಸದಾನಂದ ಮಾವಜಿ, ಬೆಟ್ಟ ರಾಜಾರಾಮ್ ಭಟ್, ಮಹೇಶ್ ಕುಮಾರ್ ಕರಿಕ್ಕಳ, ಕಿರಣ್ ಬುಡ್ಲೆಗುತ್ತು ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

Leave a Reply

You May Have Missed

error: Content is protected !!