ಕುಮಾರಧಾರಾ ನದಿಯಲ್ಲಿ ಮೊಸಳೆ ಮೃತದೇಹ ಪತ್ತೆ !

ಕುಮಾರಧಾರಾ ನದಿಯಲ್ಲಿ ಮೊಸಳೆ ಮೃತದೇಹ ಪತ್ತೆ !

ಕಡಬ: ಕುಮಾರಧಾರಾ ನದಿಯ ಪಂಜ-ಕಡಬ ಸಂಪರ್ಕ ರಸ್ತೆಯಲ್ಲಿ ಸಿಗುವ ಪುಳಿಕುಕ್ಕು ಸೇತುವೆಯ ಕೆಳಭಾಗದಲ್ಲಿ ಮೊಸಳೆಯ ಮೃತದೇಹ ಪತ್ತೆಯಾಗಿದೆ.

ಶುಕ್ರವಾರ ನದಿಯ ಒಂದು ಬದಿಯ ನೀರಿನಲ್ಲಿ ಅಂದಾಜು 2 ವರ್ಷದ ಮೊಸಳೆಯ ಮೃತದೇಹ ತೇಲುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಅದು ಗುರುವಾರ ಹಗಲು ಆಥವಾ ರಾತ್ರಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಸಾಮಾನ್ಯವಾಗಿ ಮೊಸಳೆಯ ಜೀವಿತಾವಧಿ 50ರಿಂದ 60 ವರ್ಷ. ಆದರೆ ಇಲ್ಲಿ ಮೃತಪಟ್ಟಿರುವುದು ಕೇವಲ 2 ವರ್ಷ ಒಳಗಿನದ್ದು. ನದಿಯಲ್ಲಿ ನೀರಿನ ಹರಿವು ಕುಂಠಿತಗೊಂಡಿದ್ದು, ಅಲ್ಲಲ್ಲಿ ಸಂಗ್ರಹವಾಗಿರುವ ನೀರು ಸೂರ್ಯನ ಪ್ರಖರತೆಗೆ ಬಿಸಿಯಾಗಿ ಸಾವನ್ನಪ್ಪಿರಬಹುದೇ ಅಥವಾ ನೀರು ಕಲುಷಿತಗೊಂಡು ಮೃತಪಟ್ಟಿರಬಹುದೇ ಎಂಬ ಶಂಕೆಯನ್ನು ಜನಸಾಮಾನ್ಯ ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ಪಂಜ ವಲಯ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬಂದಿ ಅಗಮಿಸಿ ಮೃತದೇಹವನ್ನು ತೆರವು ಮಾಡಿದ್ದಾರೆ.

Leave a Reply

You May Have Missed

error: Content is protected !!