ತೆಂಕುಬೈಲು ಪಿಲಿಚಾಮುಂಡಿ ದೈವ ಮತ್ತು ಪರಿವಾರ ದೈವಗಳ ನೇಮೋತ್ಸವ ಸೇವಾ ಸಮಿತಿ ರಚನೆ

ತೆಂಕುಬೈಲು ಪಿಲಿಚಾಮುಂಡಿ ದೈವ ಮತ್ತು ಪರಿವಾರ ದೈವಗಳ ನೇಮೋತ್ಸವ ಸೇವಾ ಸಮಿತಿ ರಚನೆ

ಕೊಕ್ಕಡ ಗ್ರಾಮದ ತೆಂಕುಬೈಲು ಪಿಲಿಚಾಮುಂಡಿ ದೈವ ಮತ್ತು ಪರಿವಾರ ದೈವಗಳ ದೈವಸ್ಥಾನದಲ್ಲಿ ದೈವಗಳ ಪತ್ತನಾಜೆ ವಾರ್ಷಿಕ ನೇಮೋತ್ಸವ ಸೇವಾ ಸಮಿತಿ ಆಡಳಿತಗಾರ ವಿಶ್ವನಾಥ ಗೌಡ ತೆಂಕುಬೈಲು ಇವರ ಅಧ್ಯಕ್ಷತೆಯಲ್ಲಿ ಶನಿವಾರ ಸಭೆ ನಡೆಯಿತು.

ಸಭೆಯಲ್ಲಿ ನೇಮೋತ್ಸವದ ಪ್ರಯುಕ್ತ ಸಮಿತಿಯನ್ನು ರಚಿಸಲಾಯಿತು ಅಧ್ಯಕ್ಷರಾಗಿ ಗಣೇಶ ಗೌಡ ಕಲಾಯಿ, ಉಪಾಧ್ಯಕ್ಷರಾಗಿ ವಿಶ್ವನಾಥ ಕುಕ್ಕುದೋಳಿ, ಕಾರ್ಯದರ್ಶಿ ನಾರಾಯಣ ಗೌಡ ತೆಂಕುಬೈಲು, ಜೊತೆ ಕಾರ್ಯದರ್ಶಿ ವಿಠಲ ಕುರ್ಲೆ ಮತ್ತು ಜಯಶ್ರೀ ತೆಂಕುಬೈಲು, ಕೋಶಾಧಿಕಾರಿ ಪಿತ್ತಲಕೋಡಿ ಹಾಗೂ ಪದಾಧಿಕಾರಿಗಳಾಗಿ ಕ್ಯಾಪ್ಟನ್ ನಾಗೇಶ್ ಕುರ್ಲಾಜೆ, ಬಾಬು ತೆಂಕುಬೈಲು, ಡೊಗ್ರ ಗೌಡ ಮುಂಡೂರುಪಳಿಕೆ, ಪ್ರಸನ್ನ ಗೌಡ ತೆಂಕುಬೈಲು, ಲೇಖಾನಂದ ಗೌಡ ಬಾಲ್ತಿಮಾರು, ಗೌರವಾಧ್ಯಕ್ಷರಾಗಿ ದಾಮಣ್ಣ ಗೌಡ ಡೆಚ್ಚಾರು ಇವರನ್ನು ಆಯ್ಕೆ ಮಾಡಲಾಯಿತು.

ನೇಮೋತ್ಸವದ ಪ್ರಯುಕ್ತ ಮೇ.14ರಂದು ಗೊನೆ ಮುಹೂರ್ತ ಮಾಡಲಾಯಿತು. ಮೇ.23ರಂದು ಬೆಳಗ್ಗೆ ಗಣ ಹೋಮ, ಶುದ್ದ ಕಲಶ, ಸಂಜೆ 6ರಿಂದ ಕಲ್ಕುಡ ಕಲ್ಲುರ್ಟಿ ಮತ್ತು ಪಂಜುರ್ಲಿ ಕಲ್ಲುರ್ಟಿ ದೈವಗಳಿಗೆ ನೇಮೋತ್ಸವ, ಮೇ.24ರಂದು ಬೆಳಗ್ಗೆ ಪಿಳಿ ಚಾಮುಂಡಿ ದೈವಗಳಿಗೆ ಮತ್ತು ಗುಳಿಕ ದೈವಗಳಿಗೆ ನೇಮೋತ್ಸವ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.

Leave a Reply

You May Have Missed

error: Content is protected !!