ಕಾರು ಢಿಕ್ಕಿ: ಬೈಕ್‌ ಸವಾರ ಮೃತ್ಯು

ಕಾರು ಢಿಕ್ಕಿ: ಬೈಕ್‌ ಸವಾರ ಮೃತ್ಯು

ಮಂಗಳೂರು: ಅಡ್ಯಾರ್ ಸಹ್ಯಾದ್ರಿ ಕಾಲೇಜಿನ ಎದುರು ಸೋಮವಾರ ರಾತ್ರಿ ಬೈಕ್‌ಗೆ ಕಾರು ಢಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ಕಾಲೇಜು ವಿದ್ಯಾರ್ಥಿಯೋರ್ವರು ಮೃತಪಟ್ಟಿರುವ ಘಟನೆ ವರದಿಯಾಗಿದೆ.

ಬೆಳ್ತಂಗಡಿಯ ಸಾವ್ಯೊ ಮಹೇಶ್(20) ಮೃತಪಟ್ಟವರು. ಮಹೇಶ್ ಶೆಟ್ಟಿ ವಿದ್ಯಾರ್ಥಿ ಪ್ರಣಮ್ ಶೆಟ್ಟಿ ಬೈಕ್‌ನಲ್ಲಿ ಹೋಗುತ್ತಿದ್ದಾಗ ಬಿ.ಸಿ.ರೋಡ್ ಕಡೆಯಿಂದ ಬರುತ್ತಿದ್ದ ಕಾರು ಢಿಕ್ಕಿ ಹೊಡೆಯಿತು ಎನ್ನಲಾಗಿದೆ.

ಇವರು ಟ್ಯೂಷನ್ ತರಗತಿ ಮುಗಿಸಿ ಮನೆಗೆ ತೆರಳುತ್ತಿದ್ದರು. ಕಾಲೇಜು ಎದುರಿನ ಡಿವೈಡರ್ ಬಳಿಯು ಟರ್ನ್‌ ಪಡೆದು ಮುಂದಕ್ಕೆ ಹೋಗುತ್ತಿದ್ದಾಗ ಕಾರು ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಮಹೇಶ್ ಸಹ್ಯಾದ್ರಿ ಕಾಲೇಜಿನ ರೊಬೊಟಿಕ್ ವಿಭಾಗದ ವಿದ್ಯಾರ್ಥಿಯಾಗಿದ್ದು ಬೆಳ್ತಂಗಡಿಯ ನಿವಾಸಿಯಾಗಿದ್ದಾರೆ.

Leave a Reply

You May Have Missed

error: Content is protected !!