ಕೊಕ್ಕಡ: ಪುತ್ತಿಗೆ ಶ್ರೀವಿಷ್ಣುಮೂರ್ತಿ ದೇವಸ್ಥಾನ 26ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ

ಕೊಕ್ಕಡ: ಪುತ್ತಿಗೆ ಶ್ರೀವಿಷ್ಣುಮೂರ್ತಿ ದೇವಸ್ಥಾನ 26ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ

ಕೊಕ್ಕಡ ಇಲ್ಲಿನ ಪುತ್ತಿಗೆ ಶ್ರೀವಿಷ್ಣುಮೂರ್ತಿ ದೇವಸ್ಥಾನದ 26ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವವು ಬ್ರಹ್ಮಶ್ರೀ ವೇದಮೂರ್ತಿ ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತೃತ್ವದಲ್ಲಿ, ದೇವಸ್ಥಾನದ ಪ್ರಧಾನ ಅರ್ಚಕ ಸುರೇಶ್ ಮುಚ್ಚಿಂತಾಯರ ಉಪಸ್ಥಿತಿಯಲ್ಲಿ ಏ.19ರಂದು ಜರಗಲಿರುವುದು.

ಏ.19ರ ಬೆಳಗ್ಗೆ ಗಣಹೋಮ, ಕಲಶ ಪೂಜೆ, ದೇವರಿಗೆ ಕಲಶಾಭಿಷೇಕ, ನಾಗತಂಬಿಲ ಮತ್ತು ದೈವಗಳಿಗೆ ತಂಬಿಲ, ಬೆಳಗ್ಗೆ 8ರಿಂದ ಭಜನಾ ಕಾರ್ಯಕ್ರಮ ಬಳಿಕ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಮಹಾಪೂಜೆ ಪ್ರಸಾದ ವಿತರಣೆ ಅನ್ನಸಂತರ್ಪಣೆ. ರಾತ್ರಿ 7ಕ್ಕೆ ಗಣಪತಿ ದೇವರಿಗೆ ಮತ್ತು ವಿಷ್ಣುಮೂರ್ತಿ ದೇವರಿಗೆ ರಂಗ ಪೂಜೆ ಹಾಗೂ ದುರ್ಗಾ ಪೂಜೆ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಅಧಿಕಾರಿ ತಿಳಿಸಿದರು.

Leave a Reply

You May Have Missed

error: Content is protected !!