ಗೇರುಕಟ್ಟೆ ಮೆದಿನದಲ್ಲಿ ತಾಳಮದ್ದಳೆ

ಗೇರುಕಟ್ಟೆ ಮೆದಿನದಲ್ಲಿ ತಾಳಮದ್ದಳೆ

ಹವ್ಯಾಸಿ ಯಕ್ಷಗಾನ ಭಾಗವತರಾದ ಕೊರಗಪ್ಪ ಬಂಗೇರ ಇವರ ಸ್ಮರಣಾರ್ಥ ಸುಧನ್ವ ಮೋಕ್ಷ ತಾಳಮದ್ದಳೆ ಮೆದಿನ ರಾಘವ ಪೂಜಾರಿ ಅವರ ನಿವಾಸದಲ್ಲಿ ಜರಗಿತು.

ಭಾಗವತರಾಗಿ ನಿತೀಶ್.ವೈ ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ ಮತ್ತು ಚಂದ್ರಶೇಖರ ಆಚಾರ್ಯ ಗೇರುಕಟ್ಟೆ ಅರ್ಥಧಾರಿಗಳಾಗಿ ಗೋಪಾಲ ಶೆಟ್ಟಿ ಕಳೆಂಜ, ದಿವಾಕರ ಆಚಾರ್ಯ ಗೇರುಕಟ್ಟೆ, ಮಧೂರು ಮೋಹನ ಕಲ್ಲೂರಾಯ, ರಾಘವ.ಎಚ್, ರಾಘವ ಪೂಜಾರಿ ಮೆದಿನ ಮತ್ತು ಶಿವಾನಂದ ಭಂಡಾರಿ ಭಾಗವಹಿಸಿದ್ದರು.

ಪ್ರೊ.ಮಧೂರು ಮೋಹನ ಕಲ್ಲೂರಾಯ ಸಂಸ್ಮರಣ ನುಡಿಗಳನ್ನಾಡಿದರು. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿ ನಿಯುಕ್ತರಾದ ರಾಘವ.ಎಚ್ ಗೇರುಕಟ್ಟೆ ಇವರನ್ನು ಗೌರವಿಸಲಾಯಿತು. ರಾಘವ ಮೆದಿನ ಕುಟುಂಬಸ್ಥರು ಕಲಾವಿದರನ್ನು ಗೌರವಿಸಿದರು. ರಾಘವ.ಎಚ್ ಗೇರುಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

Leave a Reply

You May Have Missed

error: Content is protected !!