ಪ್ರಾಮಾಣಿಕ ಮುಗ್ಧಭಕ್ತಿಯಿಂದ ಉತ್ತಮ ಫಲಿತಾಂಶ : ಪ್ರಕಾಶ್ ಪಿಲಿಕಬೆ

ಪ್ರಾಮಾಣಿಕ ಮುಗ್ಧಭಕ್ತಿಯಿಂದ ಉತ್ತಮ ಫಲಿತಾಂಶ : ಪ್ರಕಾಶ್ ಪಿಲಿಕಬೆ

ಕೊಕ್ಕಡ: ಉತ್ತಮ ಪ್ರಮಾಣಿಕ ಭಕ್ತಿಯಿಂದ ಸಮಾಜದಲ್ಲಿ ಪುಣ್ಯ ಕಾರ್ಯಗಳು ನೆರವೇರುತ್ತದೆ. ಅದಕ್ಕೆ ಮಾದರಿ ನಮ್ಮ ಅರಿಕೆಗುಡ್ದೆ ಪುಣ್ಯಕ್ಷೇತ್ರ. ಸಾವಿರಾರು ಮಂದಿ ಕಾರ್ಯಕರ್ತರ ಅವಿರತ ಶ್ರಮಕ್ಕೆ ಅಭಿನಂದನೆ. ಈ ದೇವಾಲಯದಲ್ಲಿ ಮುಂದೆಯೂ ಸಮಾಜಮುಖಿ ಕಾರ್ಯವನ್ನು ಮುಂದುವರಿಸುತ್ತೇವೆ ಅಲ್ಲದೆ ಅನ್ನದಾನ ಕಾರ್ಯ ಪ್ರಾರಭಿಸುತ್ತೇವೆ. ಸಂಪ್ರದಾಯದಂತೆ ಎಲ್ಲಾ ಪುಣ್ಯ ಕಾರ್ಯವನ್ನು ಇಲ್ಲಿ ನಡೆಸುತ್ತೇವೆ ಎಂದು ಅರಿಕೆಗುಡ್ದೆ ಕ್ಷೇತ್ರ ದೇವಾಲಯದ ಅಧ್ಯಕ್ಷ ಪ್ರಕಾಶ್ ಪಿಲಿಕಬೆ ಅವರು ಕಾರ್ಯಕರ್ತರನ್ನು ಉದ್ದೇಶಿಸಿ ಅಭಿನಂದನಾ ಸಭೆಯಲ್ಲಿ ಮಾತನಾಡಿದರು.

ಅರಿಕೆಗುಡ್ದೆಯಲ್ಲಿ ದೇವಿಗೆ ದೃಢ ಕಳಸ, ವನದುರ್ಗ ಹೋಮ, ಅಭಿನಂದನಾ ಸಭೆ, ಭಜನೋತ್ಸವ, ಅನ್ನಸಂತರ್ಪಣೆ ಮುಂತಾದ ಕಾರ್ಯಕ್ರಮ ಜರಗಿತ್ತು.
ಕಾರ್ಯಕ್ರಮದಲ್ಲಿ ಬ್ರಹ್ಮ‌ಕಲಶ ಅದ್ಯಕ್ಷ ಶ್ರೀರಂಗ ದಾಮ್ಲೆ, ಶ್ರೀಕರ ರಾವ್, ಸಂಚಾಲಕರಾದ ಜಯರಾಮ ನೆಲ್ಲಿತ್ತಾಯ, ಚಂದ್ರ ಶೇಖರ ಸಾಲ್ಯಾನ್, ದೇವಾಲಯದ ಅರ್ಚಕರು ಮೊದಲಾದವರು ಉಪಸ್ಥಿತರಿದ್ದರು.

ಕಡಬ ಸುಂದರ ಅವರ ತಂಡದವರಿಂದ ಹಾಗೂ ತಾಲೂಕಿನ ವಿವಿಧ ತಂಡಗಳಿಂದ ಸಾಮೂಹಿಕ ಭಜನಾ ಕಾರ್ಯಕ್ರಮ ನಡೆಯಿತು.
ಮುರಳೀಧರ ಸ್ವಾಗತಿಸಿ, ರೇಣುಕಾಸುಧೀರ್ ನಿರೂಪಿಸಿದರು.

Leave a Reply

You May Have Missed

error: Content is protected !!