ಗೋಳಿತ್ತೊಟ್ಟು: ವೋಟ್ ಹಾಕಿ ಮದುವೆ ಮಂಟಪಕ್ಕೆ ಬಂದ ವಧು

ಗೋಳಿತ್ತೊಟ್ಟು: ವೋಟ್ ಹಾಕಿ ಮದುವೆ ಮಂಟಪಕ್ಕೆ ಬಂದ ವಧು

ನೆಲ್ಯಾಡಿ: ಮದುವೆ ಸಂಭ್ರಮದ ನಡುವೆಯೂ ಮತದಾನ ಮಾಡುವ ಮೂಲಕ ವಧುವೊಬ್ಬರು ಮಾದರಿಯಾಗಿದ್ದಾರೆ.

ಬೆಳ್ತಂಗಡಿ ತಾಲೂಕು ಪಟ್ರಮೆ ಗ್ರಾಮದ ಶಿಮುಳ್ಳು ವಾರಿಜ ಹಾಗೂ ಪೂವಪ್ಪ ಗೌಡರ ಪುತ್ರಿ ಪೂಜಾ.ಎಸ್ ಹಾಗೂ ಕೊಯಿಲ ಗ್ರಾಮದ ಕೊನೆಮಜಲು ಪದ್ಮಾವತಿ ಹಾಗೂ ಸಂಜೀವ ಗೌಡರ ಪುತ್ರ ಚೇತನ್ ಕುಮಾರ್.ಕೆ., ಅವರ ವಿವಾಹವು ಗೋಳಿತ್ತೊಟ್ಪು ಶ್ರೀ ಸಿದ್ಧಿವಿನಾಯಕ ಕಲಾ ಮಂದಿರದಲ್ಲಿ ನಿಗದಿಯಾಗಿತ್ತು. ಮನೆಯಿಂದ ಮದುವೆ ದಿಬ್ಬಣದಲ್ಲಿ ನೇರವಾಗಿ ಪಟ್ರಮೆ ಮತ ಗಟ್ಟೆಗೆ ತೆರಳಿದ ವಧು ಪೂಜಾ ತನ್ನ ಹಕ್ಕು ಚಲಾಯಿಸಿ ಮದುವೆ ದಿಬ್ಬಣದ ಜೊತೆ ಮದುವೆ ಮಂಟಪಕ್ಕೆ ಆಗಮಿಸಿದರು. ಅಂದ ಹಾಗೆ ಪೂಜಾಗೆ ಇದು ಮೊದಲ ಮತದಾನವೂ ಆಗಿದೆ.

Leave a Reply

You May Have Missed

error: Content is protected !!