ಕೊಕ್ಕಡ: ಮಲಗಿದಲ್ಲೇ ಯುವಕ ನಿಧನ

ಕೊಕ್ಕಡ: ಮಲಗಿದಲ್ಲೇ ಯುವಕ ನಿಧನ

ಕೊಕ್ಕಡ ಗ್ರಾಮದ ಡೆಂಜ ಸಮೀಪದ ಪೊಯ್ಯಲೆ ಎಂಬಲ್ಲಿ ಯುವಕನೋರ್ವ ಮಲಗಿದಲ್ಲೇ ಮೃತಪಟ್ಟ ಘಟನೆ ಏ.25ರಂದು ಮಧ್ಯಾಹ್ನ ನಡೆದಿದೆ.

ಮೃತಪಟ್ಟ ವ್ಯಕ್ತಿಯನ್ನು ಹರೀಶ್(35.ವ) ಎಂದು ಗುರುತಿಸಲಾಗಿದೆ.

ಮೃತ ಹರೀಶ್ ಮತ್ತು ಆತನ ತಂದೆ ಜೋಮ ಎಂಬವರು ಮನೆಯಲ್ಲಿ ವಾಸವಾಗಿದ್ದು ತಾಯಿ ಈ ಹಿಂದೆ ನಿಧನ ಹೊಂದಿದ್ದರು.

ಹರೀಶ್ ನಿನ್ನೆ ಮಧ್ಯಾಹ್ನವೇ ಮೃತಪಟ್ಟಿದ್ದರು ಯಾರು ಸಹಾಯಕ್ಕೆ ಬಾರದ ಕಾರಣ ಇಂದು ಮಧ್ಯಾಹ್ನ ವೇಳೆಗೆ ಪೊಲೀಸರು ಸ್ಥಳಕ್ಕೆ ಆಗಮಿಸಿ. ಮೃತ ದೇಹವನ್ನು ಬೆಳ್ತಂಗಡಿಗೆ ಕೊಂಡೊಯ್ಯಲಾಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

You May Have Missed

error: Content is protected !!