ಇಚ್ಲಂಪಾಡಿ: ನೇರ್ಲ ಶಾಲಾ ಗೇರು, ತೆಂಗು ತೋಟ ಬೆಂಕಿಗಾಹುತಿ

ಇಚ್ಲಂಪಾಡಿ: ನೇರ್ಲ ಶಾಲಾ ಗೇರು, ತೆಂಗು ತೋಟ ಬೆಂಕಿಗಾಹುತಿ

ನೆಲ್ಯಾಡಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಸಂಭವಿಸಿದ ಬೆಂಕಿ ಅನಾಹುತದಿಂದ ಗೇರು, ತೆಂಗು ತೋಟ ಸುಟ್ಟುಹೋದ ಘಟನೆ ಇಚ್ಲಂಪಾಡಿಯ ನೇರ್ಲ ಶಾಲೆಯ ತೋಟದಲ್ಲಿ ಎ.27ರಂದು ಸಂಭವಿಸಿದೆ.

ಇಚ್ಲಂಪಾಡಿಯ ನೇರ್ಲ ಸರಕಾರಿ ಪ್ರಾಥಮಿಕ ಶಾಲೆಯ ತೋಟದ ಮೂಲಕ ಹಾದುಹೋಗಿದ್ದ ವಿದ್ಯುತ್ ಲೈನ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಸಂಭವಿಸಿದೆ ಎನ್ನಲಾಗಿದೆ. ಬೆಂಕಿಯ ಕಿಡಿಯಿಂದಾಗಿ ಸುಮಾರು 25 ಗೇರುಬೀಜದ ಮರಗಳು, ನಾಲ್ಕು ತೆಂಗಿನ ಮರಗಳು ಬೆಂಕಿಗಾಹುತಿಯಾಗಿದೆ.

ಸ್ಥಳೀಯರು ಹರಸಾಹಸ ಪಟ್ಟು ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ ಎಂದು ವರದಿಯಾಗಿದೆ.

Leave a Reply

You May Have Missed

error: Content is protected !!