ಹೃದಯಾಘಾತ; ಯುವಕ ಸಾವು

ಹೃದಯಾಘಾತ; ಯುವಕ ಸಾವು

ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು(27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ.

ಮೇಸ್ತ್ರಿ ಕೆಲಸಕ್ಕೆ ಹೋಗುತ್ತಿದ್ದ ಅವರು ಕೆಲಸಕ್ಕೆ ರಜೆ ಹಾಕಿ ಮನೆಯಲ್ಲೇ ಇದ್ದರು. ಅವರ ತಾಯಿ ತೋಟದ ಕೆಲಸಕ್ಕೆ ಹೋಗಿದ್ದು, ಸಂಜೆ ಬಂದು ನೋಡಿದಾಗ ಅವರು ಮಲಗಿದ್ದಲ್ಲೇ ಮೃತಪಟ್ಟಿರುವುದು ತಿಳಿದುಬಂದಿತ್ತು. ಅವರು ಶ್ರೀ ದುರ್ಗಾ ಭಜನ ಮಂಡಳಿ ದುರ್ಗಾಗಿರಿ ಮತ್ತು ಶ್ರೀ ದುರ್ಗಾ ಯುವಕ ಮಂಡಲ ದುರ್ಗಾಗಿರಿ ಇದರ ಸಕ್ರಿಯ ಸದಸ್ಯರಾಗಿದ್ದು, ವಿವಿಧ ಸಮಾಜಮುಖೀ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಮೃತರು ತಾಯಿ, ಇಬ್ಬರು ಸಹೋದರರನ್ನು ಅಗಲಿದ್ದಾರೆ.

Previous post

ಸಿಡಿಲು ಬಡಿದು ನವವಿವಾಹಿತ ಸಾವು

Next post

ಇಂಡಿಯನ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್-ಮಂಗಳೂರು :ವೈದ್ಯಕೀಯ ,ಇಂಜಿನಿಯರಿಂಗ್ ,ಮ್ಯಾನೇಜ್ಮೆಂಟ್ ,ಏವಿಯೇಷನ್,ಲಾಜಿಸ್ಟಿಕ್ಸ್ ಮತ್ತು ಸಪ್ಲೈ ಚೈನ್ ಕ್ಷೇತ್ರದ ಕೋರ್ಸುಗಳ ಪ್ರವೇಶ ಪ್ರಕ್ರಿಯೆ ಆರಂಭ

Leave a Reply

You May Have Missed

error: Content is protected !!