ನವೀಕರಣಗೊಂಡ ಉದನೆಯ ಸೈಂಟ್ ತೋಮಸ್ ಪೊರೋನಾ ಚರ್ಚ್ ನ ಉದ್ಘಾಟನೆ

ನವೀಕರಣಗೊಂಡ ಉದನೆಯ ಸೈಂಟ್ ತೋಮಸ್ ಪೊರೋನಾ ಚರ್ಚ್ ನ ಉದ್ಘಾಟನೆ

ನೆಲ್ಯಾಡಿ: ಬೆಳ್ತಂಗಡಿ ಧರ್ಮಪ್ರಾಂತ್ಯದ ಅಧೀನದಲ್ಲಿ ಇರುವ ಪ್ರಭು ಯೇಸುಕ್ರಿಸ್ತರ ಕೃಪಾಶೀರ್ವಾದದಿಂದಲೂ ಸಂತ ತೊಮಸರ ಮಧ್ಯಸ್ಥಿಕೆಯಿಂದಲೂ ಹಾಗೂ ಉದಾರದಾನಿಗಳ ಸಹಕಾರದಿಂದಲೂ ಉದನೆಯಲ್ಲಿ ನವೀಕರಣಗೊಂಡ ನೂತನ ಸೈಂಟ್ ತೋಮಸ್ ಪೊರೋನಾ ದೇವಾಲಯದ ಉದ್ಘಾಟನೆ ಶನಿವಾರ ನಡೆಯಿತು.

ಪರಮಪೂಜ್ಯ ಬಿಷಪ್ ಮಾರ್ ಲಾರೆನ್ಸ್ ಮುಕ್ಕುಯಿ ಧರ್ಮಾಧ್ಯಕ್ಷರು ಬೆಳ್ತಂಗಡಿ., ಪರಮಪೂಜ್ಯ ಗೀವರ್ಗೀಸ್ ಮಾರ್ ಮಕಾರಿಯೊಸ್, ಧರ್ಮಾಧ್ಯಕ್ಷರು ಪುತ್ತೂರು., ರೆ.ಫಾ.ತೋಮಸ್ ಕಣ್ಣಾಂಗಲ್, ಧರ್ಮಗುರು ಬೆಳ್ತಂಗಡಿ,. ರೆ.ಫಾ.ವರ್ಗೀಸ್ ಪುದಿಯಿಡತ್ತ್ ಧರ್ಮಗುರುಗಳು, ಕುಟ್ರುಪ್ಪಾಡಿ ಇವರುಗಳ ಮುಖ್ಯ ಯಾಜಕತ್ವದಲ್ಲಿ ನವ ನಿರ್ಮಿತ ದೇವಾಲಯದ ಉದ್ಘಾಟನೆ, ದೇವಾಲಯದ ಪವಿತ್ರೀಕರಣ, ದೇವಾಲಯ ಪ್ರತಿಷ್ಠಾಪನೆ, ವಿಜೃಂಭಣೆಯ ದಿವ್ಯ ಬಲಿಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಉದನೆ ಸೈಂಟ್ ತೋಮಸ್ ಪೊರೋನಾ ದೇವಾಲಯದ ಧರ್ಮಗುರು ರೆ.ಫಾ.ಸಿಬಿ ತೋಮಸ್ ಪನಚ್ಚಿಕ್ಕಲ್. ವಿವಿಧ ಚರ್ಚ್ ಗಳ ಧರ್ಮಗುರುಗಳು, ಸಿಸ್ಟರ್ ಗಳು, ಚರ್ಚ್ ನ ಉಪಾಧ್ಯಕ್ಷರುಗಳು ಹಾಗೂ ಚರ್ಚ್ ನ ಸರ್ವ ಸದಸ್ಯರು ಉಪಸ್ಥಿತರಿದ್ದರು.

Previous post

ಇಂಡಿಯನ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್-ಮಂಗಳೂರು :ವೈದ್ಯಕೀಯ ,ಇಂಜಿನಿಯರಿಂಗ್ ,ಮ್ಯಾನೇಜ್ಮೆಂಟ್ ,ಏವಿಯೇಷನ್,ಲಾಜಿಸ್ಟಿಕ್ಸ್ ಮತ್ತು ಸಪ್ಲೈ ಚೈನ್ ಕ್ಷೇತ್ರದ ಕೋರ್ಸುಗಳ ಪ್ರವೇಶ ಪ್ರಕ್ರಿಯೆ ಆರಂಭ

Next post

ನೆಲ್ಯಾಡಿ: ಆರ್ಥಿಕ ಸಂಕಷ್ಟದಲ್ಲಿರುವ ಬಡ ಮಹಿಳೆಗೆ ಮನೆ ನಿರ್ಮಾಣಕ್ಕೆ ಭೂಮಿ ಪೂಜೆ

Leave a Reply

You May Have Missed

error: Content is protected !!