ಪುತ್ತೂರು ಮಹಾಲಿಂಗೇಶ್ವರ ದೇಗುಲದ ವಠಾರದಲ್ಲಿದ್ದ ಹೋರಿ ಅಣ್ಣು ನಾಪತ್ತೆ!

ಪುತ್ತೂರು ಮಹಾಲಿಂಗೇಶ್ವರ ದೇಗುಲದ ವಠಾರದಲ್ಲಿದ್ದ ಹೋರಿ ಅಣ್ಣು ನಾಪತ್ತೆ!

ಪುತ್ತೂರು: ಇಲ್ಲಿನ ಶ್ರೀ ಮಹಾಲಿಂ ಗೇಶ್ವರ ದೇವಾಲಯದ ವಠಾರದಲ್ಲಿರುತ್ತಿದ್ದ ಸಾಧು ಸ್ವಭಾವದ ಅಣ್ಣು ಹೆಸರಿನ ಹೋರಿ ಎ.30ರಿಂದ ನಾಪತ್ತೆ ಆಗಿದೆ.

ಕರುವಾಗಿದ್ದ ಸಂದರ್ಭ ದೇವಸ್ಥಾನದ ಸಮೀಪ ಯಾರೋ ಬಿಟ್ಟು ಹೋಗಿದ್ದು, ಬಳಿಕ ಭಕ್ತರು ನೀಡುತ್ತಿದ್ದ ಬಾಳೆ ಹಣ್ಣು ಇತ್ಯಾದಿ ತಿನ್ನುತ್ತಾ ಪರಿಸರದಲ್ಲಿ ತಿರುಗಾಡುತ್ತಿತ್ತು. ಸಾಧು ಸ್ವಭಾವದಿಂದ ಭಕ್ತರ ಪ್ರೀತಿಗೆ ಪಾತ್ರವಾಗಿತ್ತು. ಇತ್ತೀಚೆಗೆ ಶೃಂಗೇರಿ ಶ್ರೀಗಳು ಕೂಡ ಪ್ರೀತಿ ತೋರ್ಪಡಿಸಿದ್ದರು.

Leave a Reply

You May Have Missed

error: Content is protected !!