ಕಣಿಯೂರು ಶೌರ್ಯ ವಿಪತ್ತು ಘಟಕದಿಂದ ಸ್ವಚ್ಛತಾ ಶ್ರಮದಾನ

ಕಣಿಯೂರು ಶೌರ್ಯ ವಿಪತ್ತು ಘಟಕದಿಂದ ಸ್ವಚ್ಛತಾ ಶ್ರಮದಾನ

ಶೌರ್ಯ ವಿಪತ್ತು ನಿರ್ವಹಣಾ ಕಣಿಯೂರು ಘಟಕದ ವತಿಯಿಂದ ಕಣಿಯೂರು ಆಯುರ್ವೇದ ಚಿಕಿತ್ಸಾಲಯದ ವಠಾರದಲ್ಲಿರುವ ಔಷಧಿ ಗಿಡಗಳ ಬದಿಯಲ್ಲಿರುವ ಪೊದೆಗಳನ್ನು ತೆಗೆದು ಸ್ವಚ್ಛತಾ ಶ್ರಮದಾನ ಕಾರ್ಯ ನಡೆಸಲಾಯಿತು.

ಸ್ವಚ್ಛತಾ ಸೇವಾಕಾರ್ಯದಲ್ಲಿ ಸ್ವಯಂಸೇವಕರಾದ ಪುರುಷೋತ್ತಮ, ಉಮೇಶ್, ಶ್ರೀಲತಾ, ಶರತ್, ಲೋಕೇಶ್, ಚಂದ್ರಕಲಾ, ಸೇವಾ ಪ್ರತಿನಿಧಿ ಪ್ರೇಮಾ, ಉಪಸ್ಥಿತರಿದ್ದರು.

ಕಣಿಯೂರು ವಲಯ ಮೇಲ್ವಿಚಾರಕರಾದ ಶಿವಾನಂದ ಜೊತೆಯಿದ್ದು ಉತ್ತಮ ಸಹಕಾರ ನೀಡಿದರು, ಆಸ್ಪತ್ರೆ ವೈದ್ಯಾಧಿಕಾರಿ ಸಹನಾ, ಅಟೆಂಡರ್ ರಾಜೀವಿ ಯವರು ಸೇವಾಕಾರ್ಯಕ್ಕೆ ಸಹಕರಿಸಿದ ಸ್ವಯಂಸೇವಕರಿಗೆ ಕೃತಜ್ಞತೆ ಸಲ್ಲಿಸಿದರು.

Leave a Reply

You May Have Missed

error: Content is protected !!