ನೆಲ್ಯಾಡಿ: ಶೌರ್ಯ ಘಟಕದಿಂದ ಶ್ರೀ ರಾಮ ಶಾಲೆಯಲ್ಲಿ ಶ್ರಮದಾನ

ನೆಲ್ಯಾಡಿ: ಶೌರ್ಯ ಘಟಕದಿಂದ ಶ್ರೀ ರಾಮ ಶಾಲೆಯಲ್ಲಿ ಶ್ರಮದಾನ

ನೆಲ್ಯಾಡಿ: ಶ್ರೀ ರಾಮ ಶಾಲೆ ಸೂರ್ಯನಗರ ನೆಲ್ಯಾಡಿಯಲ್ಲಿ ಸೋಮವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೆಲ್ಯಾಡಿ ವಲಯದ ಶೌರ್ಯ ಘಟಕದ ಸ್ವಯಂ ಸೇವಕರು, ಶಾಲೆಯ ಮೇಲ್ಚಾವಣಿ ದುರಸ್ತಿ ಕೆಲಸ ಹಾಗು ಶಾಲೆಯ ಸುತ್ತಮುತ್ತ ಸ್ವಚ್ಛತೆಯ ಶ್ರಮದಾನ ಮಾಡಲಾಯಿತು.

ನಂತರ ಘಟಕದ ಮೇ ತಿಂಗಳ ಮಾಸಿಕ ಸಭೆಯನ್ನು ಘಟಕ ಪ್ರತಿನಿಧಿ ರಮೇಶ್ ಬಾಣಜಾಲು ಇವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಮುಂದಿನ ತಿಂಗಳ ಶ್ರಮದಾನದ ಸ್ಥಳದ ಆಯ್ಕೆ ಸ್ವಯಂ ಸೇವಕರ ಭಾಗವಹಿಸುವಿಕೆ ಬಗ್ಗೆ, ತಿಂಗಳ ಮೂರನೇ ಗುರುವಾರದಂದು ಪ್ರತೀ ತಿಂಗಳ ಮಾಸಿಕ ಸಭೆ ಹಾಗು ಶ್ರಮದಾನ ಮಾಡುವುದೆಂದು ಸಭೆಯಲ್ಲಿ ಚರ್ಚಿಸಲಾಯಿತು.

ನೆಲ್ಯಾಡಿ ವಲಯ ಮೇಲ್ವಿಚಾರಕರಾದ ವಿಜೇಶ್ ಜೈನ್, ಸಂಯೋಜಕಿ ನಮಿತಾ ಶೆಟ್ಟಿ, ಸ್ವಯಂ ಸೇವಕರುಗಳು ಉಪಸ್ಥಿತರಿದ್ದರು.

Leave a Reply

You May Have Missed

error: Content is protected !!