ಪೆರಿಯಶಾಂತಿ: ಬೈಕ್ ಪಲ್ಟಿ-ಸವಾರನಿಗೆ ಗಂಭೀರ ಗಾಯ

ಪೆರಿಯಶಾಂತಿ: ಬೈಕ್ ಪಲ್ಟಿ-ಸವಾರನಿಗೆ ಗಂಭೀರ ಗಾಯ

ನೆಲ್ಯಾಡಿ: ಬೈಕ್ ಸ್ಕಿಡ್ ಆಗಿ ಪಲ್ಟಿಯಾದ ಪರಿಣಾಮ ಸವಾರ ಗಂಭೀರ ಗಾಯಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 75ರ ಕೌಕ್ರಾಡಿ ಗ್ರಾಮದ ಪೆರಿಯಶಾಂತಿ ಎಂಬಲ್ಲಿ ಮೇ 6ರಂದು ಮಧ್ಯಾಹ್ನ ನಡೆದಿದೆ.

ರೆಖ್ಯ ಗ್ರಾಮದ ಪರಕ್ಕಳ್ ನಿವಾಸಿ ಕುರಿಯನ್‌ರವರ ಪುತ್ರ ಮನೀಷ್(36ವ.)ಗಾಯಗೊಂಡ ಬೈಕ್ ಸವಾರ.ಮನೀಷ್ ಅವರು ತನ್ನ ಬೈಕ್ ನಲ್ಲಿ ನೆಲ್ಯಾಡಿಯಿಂದ ರೆಖ್ಯದ ಮನೆಗೆ ಬರುತ್ತಿದ್ದ ವೇಳೆ ಪೆರಿಯಶಾಂತಿಯಲ್ಲಿ ಬೈಕ್ ಸ್ಕಿಡ್ ಆಗಿ ಪಲ್ಟಿಯಾಗಿ ಗಂಭೀರ ಗಾಯಗೊಂಡಿದ್ದರು. ಗಾಯಾಳುವಿಗೆ ನೆಲ್ಯಾಡಿ ಆಶ್ವಿನಿ ಅಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಕೆ.ಎಂ.ಸಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ ಎಂದು ವರದಿಯಾಗಿದೆ.

ಘಟನೆ ಕುರಿತಂತೆ ಗಾಯಾಳು ಮನೀಷ್ ಅವರ ಚಿಕ್ಕಪ್ಪನ ಮಗ ನವೀನ್ ಅವರು ನೀಡಿದ ದೂರಿನಂತೆ ಉಪ್ಪಿನಂಗಡಿ ಠಾಣೆಯಲ್ಲಿ ಕೇಸು ದಾಖಲಾಗಿದೆ.

Leave a Reply

You May Have Missed

error: Content is protected !!