ವಸಂತ ಬಂಗೇರ ನಿಧನಕ್ಕೆ ಕೆ ಎಸ್ ಎಂ ಸಿ ಎ ಬೆಳ್ತಂಗಡಿ ಧರ್ಮ ಪ್ರಾಂತ್ಯ ಸಂತಾಪ

ವಸಂತ ಬಂಗೇರ ನಿಧನಕ್ಕೆ ಕೆ ಎಸ್ ಎಂ ಸಿ ಎ ಬೆಳ್ತಂಗಡಿ ಧರ್ಮ ಪ್ರಾಂತ್ಯ ಸಂತಾಪ

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಶಾಸಕರಾಗಿ ಸುದೀರ್ಘವಾದ ಸೇವೆಯನ್ನು ಬೆಳ್ತಂಗಡಿ ತಾಲೂಕಿಗೆ ನೀಡಿ, ತಾಲೂಕಿನ ಅಭಿವೃದ್ಧಿಗೆ ನಿರಂತರವಾದ ಹೋರಾಟ ದ ಮುಖಾಂತರ ಹೋರಾಟವೇ ಬದುಕನ್ನಾಗಿಸಿದ ಅಪ್ರತಿಮ ರಾಜಕಾರಣಿ, ರಾಜಕೀಯ ಬದ್ಧತೆ ಮತ್ತು ಪ್ರಭುದ್ದತೆಗೆ ಇನ್ನೊಂದು ಹೆಸರಾಗಿರುವ ಶ್ರೀ ವಸಂತ ಬಂಗೇರ ಅವರ ನಿಧನಕ್ಕೆ ಬೆಳ್ತಂಗಡಿ ಸೀರೋಮಲಬಾರ್ ಕ್ಯಾಥೋಲಿಕ್ ಅಸೊಸಿಯೇಷನ್ ಸಂತಾಪವನ್ನು ಸೂಚಿಸಿದೆ.
ಬೆಳ್ತಂಗಡಿ ತಾಲೂಕಿನ ಸೀರೋಮಲಬಾರ್ ಧರ್ಮಿಯರು ಒಂದು ರಾಜಕೀಯ ನೆಲೆಯನ್ನು ಕಂಡುಕೊಳ್ಳುವಲ್ಲಿ ವಸಂತ ಬಂಗೇರರ ಕೊಡುಗೆ ಅಪಾರ ಎಂದು ನಿರ್ದೇಶಕರಾಗಿರುವ ವಂದನಿಯ ಫಾ.ಶಾಜಿ ಮಾತ್ಯು ತಿಳಿಸಿದರು.

ಜೋಯ್ ಟಿ ಜೆ ಅವರನ್ನು ಬೆಳ್ತಂಗಡಿ ತಾಲೂಕು ಪಂಚಾಯತ್ ಅಧ್ಯಕ್ಷರನ್ನಾಗಿ ಮಾಡುವ ಮೂಲಕ ತಾಲೂಕಿನ ರಾಜಕೀಯ ಇತಿಹಾಸದಲ್ಲಿ ಸೀರೋ ಮಲಬಾರ್ ಕ್ರೈಸ್ತರಿಗೆ ಮರೆಯಲಾರದ ಕ್ಷಣ ಎಂದು ಕೆ ಎಸ್ ಎಂ ಸಿ ಎ ಬೆಳ್ತಂಗಡಿ ಧರ್ಮ ಪ್ರಾಂತ್ಯ ಸಂತಾಪ ಸಂದೇಶದಲ್ಲಿ ತಿಳಿಸಿದಾರೆ.

ಅಧ್ಯಕ್ಷರಾದ ಬಿಟ್ಟಿ ನೆಡುನಿಲಂ, ಪ್ರದಾನ ಕಾರ್ಯದರ್ಶಿ ಸೇಬಾಸ್ಟಿನ್ ಎಂ ಜೆ, ಪಿ ಆರ್ ಓ ಸೇಬಾಸ್ಟಿನ್ ಪಿ ಸಿ, ಕೋಶಾಧಿಕಾರಿ ಜಿಮ್ಮಿ ಗುಂಡ್ಯ, ಸದಸ್ಯರಾದ ಜಾರ್ಜ್ ಟಿ.ವಿ, ಬೆನ್ನಿ ಮುದೂರು,ಅಲ್ಫೋನ್ಸ ಬೆಳ್ತಂಗಡಿ, ರೀನಾ, ಶಿಬಿ ಧರ್ಮಸ್ಥಳ, ಮಾತ್ಯು ಮೂರ್ನಾಡ್ ಸಂತಾಪ ಸೂಚಿಸಿದರು

Leave a Reply

You May Have Missed

error: Content is protected !!