ಕೊಕ್ಕಡ: ಕುಡಿದ ಮತ್ತಿನಲ್ಲಿ ಪಶು ಪರಿವೀಕ್ಷಕ ಹೊಡೆದ ಏಟಿಗೆ ಪಟ್ರಮೆಯ ಕೃಷ್ಣ ಬಲಿ

ಕೊಕ್ಕಡ: ಪಶು ಪರಿವೀಕ್ಷಕರು ಕುಡಿದ ಮತ್ತಿನಲ್ಲಿ ಹೊಡೆದ ಏಟಿನಿಂದ ವ್ಯಕ್ತಿಯೋರ್ವರು ಪ್ರಾಣ ಕಳೆದುಕೊಂಡಿರುವ ಘಟನೆ ಕೊಕ್ಕಡದಲ್ಲಿ ಮೇ 13ರಂದು ಸಂಜೆ ನಡೆದಿದೆ.

ಅನಾರೋಗ್ಯದ ಹಿನ್ನೆಲೆಯಲ್ಲಿ ಪುತ್ತೂರಿನ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಂಡು ಮೇ 13ರಂದು ಡಿಸ್ಚಾರ್ಜ್ ಆಗಿ ಕೊಕ್ಕಡಕ್ಕೆ ಬಸ್ಸಿನಲ್ಲಿ ಬಂದ ಕೃಷ್ಣ ಅವರು ಕೊಕ್ಕಡದಲ್ಲಿ ಬಸ್ಸಿನಿಂದ ಇಳಿದು ರಸ್ತೆ ದಾಟುತ್ತಿದ್ದಂತೆ ಅಲ್ಲೇ ಕುಡಿದ ಮತ್ತಿನಲ್ಲಿದ್ದ ಕೊಕ್ಕಡದ ಪಶು ಪರಿವೀಕ್ಷಕ ಡಾ.ಕುಮಾರ್ ಎಂಬವರು ಏಕಾಏಕಿ ಕೃಷ್ಣ ಅವರ ಕೆನ್ನೆಗೆ ಹೊಡೆದಿದ್ದಾರೆ ಎನ್ನಲಾಗಿದೆ. ಮೊದಲೇ ಅನಾರೋಗ್ಯದಿಂದ ಬಳಲುತ್ತಿದ್ದ ಕೃಷ್ಣ ಅವರು ಪಶು ಪರಿವೀಕ್ಷಕರ ಏಟಿನ ಹೊಡೆತಕ್ಕೆ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಧರ್ಮಸ್ಥಳ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತರಿಗೆ ಪತ್ನಿ, ಓರ್ವ ಪುತ್ರಿ ಹಾಗೂ ಸಹೋದರ ಅಗಲಿದ್ದಾರೆ.





















Leave a Reply