ಶಿಬಾಜೆ : ನಾಪತ್ತೆಯಾಗಿದ್ದ ಐಂಗುಡ ವಾಸು ರಾಣ್ಯ ಭಂಡಿ ಹೊಳೆಕಾಡಿನಲ್ಲಿ ಪತ್ತೆ

ಶಿಬಾಜೆ : ನಾಪತ್ತೆಯಾಗಿದ್ದ ಐಂಗುಡ ವಾಸು ರಾಣ್ಯ ಭಂಡಿ ಹೊಳೆಕಾಡಿನಲ್ಲಿ ಪತ್ತೆ

ಕೊಕ್ಕಡ: ನಾಪತ್ತೆಯಾಗಿದ್ದ ಶಿಬಾಜೆ ಗ್ರಾಮದ ಐಂಗುಡ ನಿವಾಸಿ ವಾಸು ರಾಣ್ಯರ ಕೂ… ಶಬ್ದ ಕೇಳಿ ಸ್ಥಳೀಯರು ಮತ್ತು ಶೌರ್ಯ ವಿಪತ್ತು ತಂಡದವರು ಪುನಃ ಹುಡುಕಾಟ ನಡೆಸಿದಾಗ . ಅವರ ಮನೆಯ ಮೇಲಿನ ಭಾಗದ ಭಂಡಿ ಹೊಳೆಕಾಡಿನ ಸುಮಾರು 3ಕಿಮೀ ದೂರದಲ್ಲಿ ಮೇ.26ರಂದು ಮದ್ಯಾಹ್ನ ಪತ್ತೆಯಾಗಿದ್ದಾರೆ.

ಕೂ…. ಕೂ… ಕೂಗಿನ ಶಬ್ದವನ್ನು ಮನೆಯವರು ಗಮನಿಸಿ ಮೇ 26ರಂದು ಮುಂಜಾನೆಯಿಂದ ಹುಡುಕಾಟ ಆರಂಭಿಸಿದ್ದು ವಾಸು ರಾಣ್ಯರನ್ನು ಕರೆತರುವ ನಿಟ್ಟಿನಲ್ಲಿ ಶೌರ್ಯ ವಿಪತ್ತು ತಂಡದ ಸದಸ್ಯರು ಮತ್ತು ಸ್ಥಳೀಯರು ಕಾರ್ಯೋನ್ಮುಖರಾಗಿ ಹುಡುಕಿ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.

ಕಾರ್ಯಾಚರಣೆಯಲ್ಲಿ ಶೌರ್ಯ ವಿಪತ್ತು ತಂಡದ ಅವಿನಾಶ್ ಭಿಡೆ, ಶೀನಪ್ಪ, ಗಂಗಾಧರ ಶಿಶಿಲ, ಕುಶಾಲಪ್ಪ ಶಿಶಿಲ, ಪ್ರವೀಣ್ ಪತ್ತಿಮಾರು ಮತ್ತು ಸ್ಥಳೀಯರಾದ ಗೋವಿಂದ, ಗಣೇಶ್, ಸುರೇಶ, ಪುನೀತ್, ಶರತ್, ಶಶಿಕಾಂತ್, ವಿಶ್ವನಾಥ್, ಕೃಷ್ಣ ನಾಯ್ಕ್, ವಾಸು ರಾಣ್ಯರ ಪುತ್ರರಾದ ಕಮಲಾಕ್ಷ ಮತ್ತು ಸುರೇಶ್ ಮೊದಲಾದವರು ಸಹಕರಿಸಿದರು.

Leave a Reply

You May Have Missed

error: Content is protected !!