ಸೇತುವೆ ತಡೆಗೋಡೆಗೆ ಕೆಎಸ್ಸಾರ್ಟಿಸಿ ಬಸ್ ಢಿಕ್ಕಿ

ಸೇತುವೆ ತಡೆಗೋಡೆಗೆ ಕೆಎಸ್ಸಾರ್ಟಿಸಿ ಬಸ್ ಢಿಕ್ಕಿ

ಸೇತುವೆಯ ತಡೆಗೋಡೆಗೆ ಸರಕಾರಿ ಬಸ್ ಢಿಕ್ಕಿಯಾದ ಘಟನೆ ಕೊಯ್ಯರು ಸಮೀಪದ ಕಾಂತಾಜೆ ಎಂಬಲ್ಲಿ ರವಿವಾರ ಬೆಳಿಗ್ಗೆ ನಡೆದಿದೆ.

ಬಂದಾರಿನಿಂದ ಹೊರಟು ಕೊಯ್ಯರು ಮಾರ್ಗವಾಗಿ ಬೆಳ್ತಂಗಡಿಗೆ ಹೋಗುವ ಸರಕಾರಿ ಬಸ್ಸಿನಲ್ಲಿ ಸುಮಾರು 25 ಕ್ಕೂ ಹೆಚ್ಚು ಜನರು ಪ್ರಯಾಣಿಕರಿದ್ದರು. ಚಾಲಕ ಅತೀ ವೇಗವಾಗಿ ಬಸ್ ಚಲಾಯಿಸುವ ವೇಳೆಗೆ ಕೊಯ್ಯರು ಸಮೀಪದ ಕಾಂತಾಜೆಯ ಕಡಿದಾದ ತಿರುವಿನಲ್ಲಿ ನಿಯಂತ್ರಣ ತಪ್ಪಿ ದೊಡ್ಡ ತೋಡಿನ ಸೇತುವೆಯ ತಡೆಗೋಡೆಗೆ ಢಿಕ್ಕಿಯಾಗಿದೆ. ತಡೆಗೋಡೆ ಮುರಿದರೂ ಬಸ್ ಅಲ್ಲಿಯೇ ನಿಂತಿದ್ದು, ಅಂದಾಜು 20 ಅಡಿ ಕೆಳಗೆ ಪ್ರಪಾತಕ್ಕೆ ಬೀಳುವುದು ಕೂದಲೆಳೆ ಅಂತರದಲ್ಲಿ ತಪ್ಪಿತು. ಇದರಿಂದಾಗಿ ದೊಡ್ಡ ಅಪಾಯ ತಪ್ಪಿದಂತಾಗಿದೆ. ಪ್ರಯಾಣಿಕರು ಚಾಲಕನ ದುರ್ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದು, ಯಾವುದೇ ತೊಂದರೆ ಇಲ್ಲದೆ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

You May Have Missed

error: Content is protected !!