ಸೌತಡ್ಕ: ಬೊಲೆರೋ ಜೀಪು, ಕಾರು ಡಿಕ್ಕಿ : ಎರಡು ವಾಹನಗಳು ಜಖಂ

ಸೌತಡ್ಕ: ಬೊಲೆರೋ ಜೀಪು, ಕಾರು ಡಿಕ್ಕಿ : ಎರಡು ವಾಹನಗಳು ಜಖಂ

ಕೊಕ್ಕಡ: ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಸೌತಡ್ಕ -ಕೊಕ್ಕಡ ರಸ್ತೆಯ ನೆಕ್ಕರ್ಲ ಎಂಬಲ್ಲಿ ಕಾರು ಮತ್ತು ಬೊಲೆರೋ ಜೀಪ್ ಮಧ್ಯೆ ಮೇ 31ರಂದು ಅಪಘಾತ ಸಂಭವಿಸಿದೆ.

ಧರ್ಮಸ್ಥಳ ಗ್ರಾಮದ ನೇತ್ರಾವತಿ ನಿವಾಸಿ ಶಿವಪ್ಪ ಗೌಡ ಎಂಬವರು ಬೊಲೆರೋ ಜೀಪು ನಲ್ಲಿ ಅಡಿಕೆಯನ್ನು ಕೊಂಡೊಯ್ಯುತ್ತಿರುವಾಗ ಕೌಕ್ರಾಡಿ ಗ್ರಾಮದ ಸೌತಡ್ಕ -ಕೊಕ್ಕಡ ರಸ್ತೆಯ ನೆಕ್ಕರ್ಲ ಎಂಬಲ್ಲಿಗೆ ತಲುಪುತ್ತಿದ್ದಂತೆ ಕೊಕ್ಕಡದಿಂದ ಸೌತಡ್ಕ ದೇವಸ್ಥಾನದ ಕಡೆಗೆ ಬರುತ್ತಿದ್ದ ಕಾರಿನ ಚಾಲಕ ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಚಲಾಯಿಸಿದ ಪರಿಣಾಮ ಬೊಲೆರೋ ಜೀಪುಗೆ ಡಿಕ್ಕಿಯಾಗಿ ಎರಡು ವಾಹನಗಳು ಜಖಂಗೊಂಡಿದೆ. ಎರಡು ವಾಹನದಲ್ಲಿದ್ದ ಪ್ರಯಾಣಿಕರು ಅಪಘಾತದಿಂದ ಪಾರಾಗಿದ್ದಾರೆ.

ಕಾರು ಚಾಲಕನ ವಿರುದ್ಧ ಶಿವಪ್ಪ ಗೌಡ ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

You May Have Missed

error: Content is protected !!