ಕಡಬ ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪರಿಸರ ದಿನಾಚರಣೆ

ಕಡಬ ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪರಿಸರ ದಿನಾಚರಣೆ

ಕಡಬದ ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪರಿಸರ ದಿನಾಚರಣೆಯನ್ನು ಜೂ.5 ರಂದು ಆಚರಿಸಲಾಯಿತು.

ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಆಡಳಿತ ಮಂಡಳಿಯವರು ಜೊತೆ ಸೇರಿ ಗಿಡ ನೆಡುವ ಕಾರ್ಯಕ್ರಮವನ್ನು ನಡೆಸಿದರು. ಶಾಲಾ ಸಂಚಾಲಕ ರೆ|ಫಾ|ಅನಿಶ್ ಪಿಲಿಪ್, ಮುಖ್ಯ ಶಿಕ್ಷಕಿ ಸಿ.ಮರಿಯ ಲೂಯಿಸ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಎಂಟನೆಯ ತರಗತಿಯ ವಿದ್ಯಾರ್ಥಿಗಳಾದ ಪ್ರಜೋತ್, ಸಾಬೀಕ್, ಭಾಗ್ಯಶ್ರೀ, ಜೆನಿಲಿಯ, ಖುಷಿ, ಆಸ್ಟಿನ್, ಸುಜನ್, ನವನೀತ್, ಆತ್ಮಿ, ಮುರ್ಷಿದ, ಬಿಂದ್ಯಾ, ವರ್ಷ, ಡೆಲ್ನಾ, ಸಹನಾ, ಶ್ರೇಯ, ಮುಬಿನ್, ಅದ್ವೈತ್ ಪರಿಸರ ಜಾಗೃತಿ ಮೂಡಿಸುವಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ವೈಭವ್.ಪಿ ಕಾರ್ಯಕ್ರಮವನ್ನು ನಿರೂಪಿಸಿ ಭವಿತ್ ವಂದಿಸಿದರು. ಪೋಷಕರಾದ ನಾರಾಯಣ ಬಲ್ಯ, ರಾಮಕೃಷ್ಣ ಉಬರಳೆ, ಬೋಸ್ಕೋ, ಖಲೀಲ್ ಮತ್ತು ದಿನೇಶ್ ಕುಮಾರ್ ಇವರು ಗಿಡಗಳ ಪ್ರಾಯೋಜಕತ್ವವನ್ನು ವಹಿಸಿದ್ದರು.

Leave a Reply

You May Have Missed

error: Content is protected !!