ಅರಿಕೆಗುಡ್ಡೆ ದೇವಳದ ಆವರಣದಲ್ಲಿ ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆ

ಅರಿಕೆಗುಡ್ಡೆ ದೇವಳದ ಆವರಣದಲ್ಲಿ ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆ

ಕೊಕ್ಕಡ: ಅರಸಿನಮಕ್ಕಿ ಇಲ್ಲಿನ ಅರಿಕೆಗುಡ್ಡೆ ವನದುರ್ಗ ದೇವಳದ ಆವರಣದಲ್ಲಿ ಅರಣ್ಯ ಇಲಾಖೆ, ಹತ್ಯಡ್ಕ ಒಕ್ಕೂಟ, ಶೌರ್ಯ ವಿಪತ್ತು ತಂಡದ ಸದಸ್ಯರು ಮತ್ತು ದೇವಾಲಯದ ಭಕ್ತರು ಸೇರಿ ವಿಶ್ವ ಪರಿಸರ ದಿನವನ್ನು ಗಿಡ ನೆಡುವ ಮೂಲಕ ಆಚರಿಸಿದರು.

ಈ ಸಂಧರ್ಭದಲ್ಲಿ ದೇವಳದ ಟ್ರಸ್ಟ್ ನ ಅಧ್ಯಕ್ಷರಾದ ಪ್ರಕಾಶ್ ಪಿಲಿಕ್ಕಬೆ, ಟ್ರಸ್ಟ್ ನ ಕಾರ್ಯದರ್ಶಿ ಮುರಳಿಧರ್ ಶೆಟ್ಟಿಗಾರ್ ಸದಸ್ಯರಾದ ರೋಹಿತಾಶ್ವ ಶೆಟ್ಟಿಗಾರ್, ಗಣೇಶ್, ವಸಂತ್, ದೇವಕಿ, ಮಮತಾ, ಉಪ್ಪಿನಂಗಡಿ ಅರಣ್ಯ ವಿಭಾಗದ ಉಪವಲಯ ಅರಣ್ಯಧಿಕಾರಿ ಯತಿಂದ್ರ, ಅರಣ್ಯ ರಕ್ಷಕ ನಿಂಗಪ್ಪ ಅವಾರಿ, ಸಿದ್ದಿವಿನಾಯಕ ಭಜನಾ ಮಂಡಳಿ ಅಧ್ಯಕ್ಷರಾದ ಕೃಷ್ಣಪ್ಪ ಗೌಡ ಪಡ್ಡಾಯಿಬೆಟ್ಟು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಮೇಲ್ವಿಚಾರಕರಾದ ಶಶಿಕಲಾ, ಸೇವಾ ಪ್ರತಿನಿಧಿಗಳಾದ ಯಮುನಾ, ರೂಪ, ಒಕ್ಕೂಟದ ಅಧ್ಯಕ್ಷರಾದ ಪ್ರಭಾಕರ ಶೆಟ್ಟಿ, ವಿಠಲ್ ಅಡಪಾ, ಸುನಂದ.ಟಿ ಮತ್ತು ಶೌರ್ಯ ವಿಪತ್ತು ತಂಡದಿಂದ ಅವಿನಾಶ್ ಭಿಡೆ, ಕುಶಾಲಪ್ಪ ಗೌಡ, ಸೋಮಶೇಖರ್ ಗೌಡ, ಕಿರಣ್, ರಮೇಶ್, ಸ್ನೇಕ್ ಸುರೇಶ್, ಹರೀಶ್ ವಳಗುಡ್ಡೆ ಉಪಸ್ಥಿತರಿದರು.

ಮುರುಳಿಧರ್ ಶೆಟ್ಟಿಗಾರ್ ಕಾರ್ಯಕ್ರಮದ ಬಗ್ಗೆ ಪ್ರಸ್ತಾವಿಕವಾಗಿ ಮಾತನಾಡಿ ಅತಿಥಿ. ಗಳನ್ನು ಸ್ವಾಗತಿಸಿದರು.

Leave a Reply

You May Have Missed

error: Content is protected !!