ಶಾಲಾ ಆವರಣದಲ್ಲಿ ಕೊಲೆಗೈದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ

ಶಾಲಾ ಆವರಣದಲ್ಲಿ ಕೊಲೆಗೈದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ

ಯುವಕನೋರ್ವನ ಮೃತದೇಹ ಕೊಲೆಗೈದ ಸ್ಥಿತಿಯಲ್ಲಿ ಸುಳ್ಯ ಸಮೀಪದ ಶಾಲೆಯ ಜಗಲಿಯಲ್ಲಿ ಜೂ. 17ರ ಸೋಮವಾರ ಬೆಳಗ್ಗೆ ಪತ್ತೆಯಾಗಿದೆ.

ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಕಾಂತಮಂಗಲ ಸರಕಾರಿ ಶಾಲಾ ಜಗಲಿಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ. ತಲೆಗೆ ಕಲ್ಲು ಎತ್ತಿ ಹಾಕಿ ಕೊಲೆಗೈದಿರುವುದು ಕಂಡುಬಂದಿದೆ.

ಸುಮಾರು 25-30 ವರ್ಷದ ಅಪರಿಚಿತ ಯುವಕನ ಶವ ಎಂದು ಅಂದಾಜಿಸಲಾಗಿದೆ.

ಸುಳ್ಯ ವೃತ್ತ ನಿರೀಕ್ಷಕ ಸತ್ಯನಾರಾಯಣ, ಸೇರಿದಂತೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.

ಕಳೆದ ರವಿವಾರ ಬೆಳ್ಳಾರೆ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯ ಕೊಲೆ ನಡೆದಿತ್ತು. ಇದು ಕೂಡ ತಲೆಗೆ ಕಲ್ಲು ಎತ್ತಿ ಹಾಕಿ ಕೃತ್ಯ ಎಸಗಲಾಗಿದ್ದು, ಆರೋಪಿಯ ಬಂಧನವಾಗಿತ್ತು.

Leave a Reply

You May Have Missed

error: Content is protected !!