ನೆಲ್ಯಾಡಿ: ಸೋಶಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸಂಸ್ಥಾಪನಾ ದಿನಾಚರಣೆ

ನೆಲ್ಯಾಡಿ: ಸೋಶಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸಂಸ್ಥಾಪನಾ ದಿನಾಚರಣೆ

ನೆಲ್ಯಾಡಿ: ಸುಳ್ಯ ವಿಧಾನಸಭಾ ಕ್ಷೇತ್ರ, ನೆಲ್ಯಾಡಿ ಗ್ರಾಮ ಸಮಿತಿ ವತಿಯಿಂದ ಸೋಶಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ 16ನೇ ವರ್ಷದ ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ ದ್ವಜಾರೋಹಣ ಕಾರ್ಯಕ್ರಮ ನೆಲ್ಯಾಡಿ ಪೇಟೆಯಲ್ಲಿ ನಡೆಯಿತು.

ಧ್ವಜಾರೋಹಣವನ್ನು ಎಸ್ಡಿಪಿಐ ರಾಜ್ಯ ಕಾರ್ಯದರ್ಶಿ ಆನಂದ ಮಿತ್ತ ಬೈಲು ನೆರವೇರಿಸಿ ಪಕ್ಷದ ಕಾರ್ಯವೈಖರಿಯ ಕುರಿತು ಸಂದೇಶ ಭಾಷಣ ಮಾಡಿದರು, ಅಧ್ಯಕ್ಷತೆಯನ್ನು ಎಸ್ಡಿಪಿಐ ನೆಲ್ಯಾಡಿ ಗ್ರಾಮ ಸಮಿತಿ ಅಧ್ಯಕ್ಷ ಸಿದ್ದೀಕ್ ಮಣ್ಣಗುಂಡಿ, ವಹಿಸಿದ್ದರು, ನೆಲ್ಯಾಡಿ ಬದ್ರಿಯಾ ಜುಮಾ ಮಸೀದಿ ಇದರ ಪ್ರಧಾನ ಕಾರ್ಯದರ್ಶಿ ರಫೀಕ್ ಬೈಲು ಶುಭಹಾರೈಸಿದರು.

ನೆಲ್ಯಾಡಿ ಕಡಬ ಬ್ಲಾಕ್ ಅಧ್ಯಕ್ಷ ಹಾರೀಸ್ ಕಲಾರ, ಉಪಾಧ್ಯಕ್ಷ ರಝಾಕ್ ಕೊಲ್ಪೆ, ಎಸ್ಡಿಪಿಐ ನೆಲ್ಯಾಡಿ ವಲಯಾಧ್ಯಕ್ಷ ಹನೀಫ್ ಬೈಲು ಉಪಸ್ಥಿತರಿದ್ದರು.

ಎಸ್ಡಿಪಿಐ ನೆಲ್ಯಾಡಿ ಗ್ರಾಮ ಸಮಿತಿ ಕಾರ್ಯದರ್ಶಿ ಸಿದ್ದೀಕ್ ನೆಲ್ಯಾಡಿ ಸ್ವಾಗತಿಸಿ, ಹಾರಿಸ್ ಕಲಾರ ವಂದಿಸಿದರು, ಅನ್ಸಾರ್ ಕೊಕ್ಕಡ ಕಾರ್ಯಕ್ರಮವನ್ನು ನಿರೂಪಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಸಿಹಿ ತಿಂಡಿ ಹಂಚುವ ಮೂಲಕ ಸಂಸ್ಥಾಪನಾ ದಿನವನ್ನು ಆಚರಿಸಲಾಯಿತು.

Leave a Reply

You May Have Missed

error: Content is protected !!