ಕಡಬ: ಅಕ್ರಮ ಜಾನುವಾರು ಸಾಗಾಟ ಇಬ್ಬರ ಬಂಧನ-ಎಫ್.ಐ.ಆರ್ ದಾಖಲು

ನೇಸರ ಫೆ.17: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಆರೋಪದಡಿ ಜಾನುವಾರು ಸಹಿತ ಇಬ್ಬರನ್ನು ಕಡಬ ಪೋಲಿಸರು ವಶಕ್ಕೆ ಪಡೆದು ಎಫ್.ಐ.ಆರ್ ದಾಖಲಿಸಿದ್ದಾರೆ.
ಪಿಕಪ್ ಚಾಲಕ ರವಿ ಹಾಗೂ ಅಬ್ದುಲ್ ಅಜೀಝ್ ಬಂಧಿತರು. ಫೆ.16 ರಂದು ಕುಟ್ರುಪಾಡಿ ಗ್ರಾಮದ ಕೇಪು ಎಂಬಲ್ಲಿ ಪಿಕಪ್ ವಾಹನದಲ್ಲಿ ಅಕ್ರಮವಾಗಿ ಜಾನುವಾರನ್ನು ನೆಲ್ಯಾಡಿ ಕಡೆಗೆ ಸಾಗಿಸುತ್ತಿದ್ದರು ಎನ್ನಲಾಗಿದೆ. ವಿಷಯ ತಿಳಿದ ಗಸ್ತು ನಿರತ ಹೊಯ್ಸಳ ಪೊಲೀಸರು ಪಿಕಪ್ ವಾಹನ ಹಾಗೂ ಇಬ್ಬರನ್ನು ವಶಕ್ಕೆ ಪಡೆದಿದ್ದರು. ಕಡಬ ಠಾಣೆಯಲ್ಲಿ ಅ.ಕ್ರ 14/2022 ಕಲಂ. 4.5 ವಾಹನಕರ್ನಾಟಕ ಜಾನುವಾರು ಹತ್ಯೆ ಪ್ರತಿಭಂದಕ ಮತ್ತು ಸಂರಕ್ಷಣಾ ಅದ್ಯಾದೇಶ -2020 ಹಾಗೂ ಕಲಂ ; 66(1) 192(ಂ) Iಒಗಿ ಂಅಖಿ-1988 ಯಂತೆ ಪ್ರಕರಣ ದಾಖಲಾಗಿದೆ.














Leave a Reply