ಸೈಂಟ್ ಆನ್ಸ್ ಶಾಲೆಯಲ್ಲಿ ಶಾಲಾ ವಿದ್ಯಾರ್ಥಿ ಸಂಘದ ಚುನಾವಣೆ

ಸೈಂಟ್ ಆನ್ಸ್ ಶಾಲೆಯಲ್ಲಿ ಶಾಲಾ ವಿದ್ಯಾರ್ಥಿ ಸಂಘದ ಚುನಾವಣೆ

ಕಡಬ: ಸೈoಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿ ಮಂತ್ರಿ ಮಂಡಲದ ಚುನಾವಣೆ ನಡೆಸಿ ವಿದ್ಯಾರ್ಥಿ ನಾಯಕರನ್ನು ಆರಿಸಲಾಯಿತು.

ಸಂಸ್ಥೆಯ ಸಂಚಾಲಕ ವಂ.ಪ್ರಕಾಶ್ ಪೌಲ್ ಡಿಸೋಜಾ ಮತದಾರ ವಿದ್ಯಾರ್ಥಿಗಳ ಬೆರಳಿಗೆ ಶಾಯಿ ಗುರುತು ಹಾಕುವ ಮೂಲಕ ಚುನಾವಣೆಗೆ ಚಾಲನೆ ನೀಡಿದರು.

ಸೈoಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ವಂ.ಅಮಿತ್ ಪ್ರಕಾಶ್ ರೋಡ್ರಿಗಸ್, ಪ್ರಾಥಮಿಕ ಮುಖ್ಯ ಶಿಕ್ಷಕಿ ದಕ್ಷ ಉಪಸ್ಥಿತರಿದ್ದರು.

3 ರಿಂದ 10 ನೇ ತರಗತಿ ವರೆಗಿನ ವಿದ್ಯಾರ್ಥಿಗಳು ಮತ ಚಲಾಯಿಸಿದರು. ಶಾಲಾ ಚುನಾವಣೆ ಅಧಿಕಾರಿಯಾಗಿ ಶಿಕ್ಷಕಿಯರಾದ ಝೀನತ್ ಬಾನು ಹಾಗೂ ಸಂಗೀತ ಉಪಸ್ಥಿತರಿದ್ದರು.

Leave a Reply

You May Have Missed

error: Content is protected !!