ಪಡುಬೆಟ್ಟು ಪರಿಸರದಲ್ಲಿ ಒಂಟಿ ಕಾಡಾನೆ ಸಂಚಾರ

ಪಡುಬೆಟ್ಟು ಪರಿಸರದಲ್ಲಿ ಒಂಟಿ ಕಾಡಾನೆ ಸಂಚಾರ

ನೆಲ್ಯಾಡಿ: ನೆಲ್ಯಾಡಿ ಸಮೀಪದ ಪಡುಬೆಟ್ಟು ಪರಿಸರದಲ್ಲಿ ಒಂಟಿ ಕಾಡಾನೆಯೊಂದು ಜೂ.23 ರಂದು ಬೆಳಗ್ಗೆ ಸುಮಾರು 6.00 ಗಂಟೆಯಿಂದ 7.00 ಗಂಟೆಯ ಸಮಯದಲ್ಲಿ ಕಾಣಿಸಿಕೊಂಡಿದ್ದು ಸ್ಥಳೀಯರಲ್ಲಿ ಆತಂಕ ಉಂಟು ಮಾಡಿದೆ.

ವಿಷ್ಣುಮೂರ್ತಿ ದೇವಸ್ಥಾನದ ಬಳಿಯಿಂದ ಪಡುಬೆಟ್ಟು ಕಡೆಗೆ ಪ್ರಯಾಣಿಸಿದ್ದು ಜಕ್ಕು ಡಿಸೋಜ ಅವರ ಮನೆಯ ಅಂಗಳದಿಂದ ಮುಂದೆ ಹೋಗಿದ್ದು, ಸೆವುರಿನ್ ಡಿಸೋಜ ಅವರ ನಾಯಿ ಬೊಗಳುವ ಸದ್ದು ಕೇಳಿ ಹೊರಗೆ ಬಂದು ನೋಡಿದಾಗ ಮನೆಯ ಎದುರುಗಡೆ ಇರುವ ದುಲ್ಸೀನ ಡಿಸೋಜ ಅವರ ತೋಟದಿಂದ ಹೋಗಿ ಕಾಡಿನ ಕಡೆ ಪ್ರಯಾಣ ಬೆಳೆಸಿರುವುದು ಕಂಡು ಬಂದಿದೆ.

ತೋಟದಲ್ಲಿ ಹೋಗುವಾಗ ಕೆಲವು ಬಾಳೆಗಿಡಗಳು ಮುರಿದಿದ್ದು, ಇನ್ಯಾವುದೇ ರೀತಿಯ ಹಾನಿಯುಂಟಾಗಿರುವುದಿಲ್ಲ.

Leave a Reply

You May Have Missed

error: Content is protected !!