ರಿಕ್ಷಾ ತೊಳೆಯುತ್ತಿದ್ದವರ ಮೇಲೆ ಬಿದ್ದ ವಿದ್ಯುತ್ ತಂತಿ; ಇಬ್ಬರ ದುರ್ಮರಣ

ರಿಕ್ಷಾ ತೊಳೆಯುತ್ತಿದ್ದವರ ಮೇಲೆ ಬಿದ್ದ ವಿದ್ಯುತ್ ತಂತಿ; ಇಬ್ಬರ ದುರ್ಮರಣ

ಮಂಗಳೂರು:ರಿಕ್ಷಾ ತೊಳೆಯುತಿದ್ದ ವೇಳೆ ವಿದ್ಯುತ್ ತಂತಿ ತುಂಡಾಗಿ ಬಿದ್ದ ಪರಿಣಾಮ ಇಬ್ಬರು ವ್ಯಕ್ತಿಗಳು ಮೃತಪಟ್ಟ ಘಟನೆ ನಗರದ ರೊಸಾರಿಯೊ ಬಳಿ ಇಂದು (ಗುರುವಾರ) ಮುಂಜಾನೆ ನಡೆದಿದೆ.

ಮೃತರನ್ನು ಹಾಸನ ಮೂಲದ ರಾಜು ಮತ್ತು ರಾಮಕುಂಜದ ದೇವರಾಜ್ ಎನ್ನಲಾಗಿದೆ.

ಇವರು ರೊಸಾರಿಯೋ ಬಳಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ ಇಂದು ಬೆಳಿಗ್ಗೆ ರಿಕ್ಷಾ ತೊಳೆಯುವ ಸಂದರ್ಭ ಸರ್ವಿಸ್ ವೈರ್ ತುಂಡಾಗಿ ಒಬ್ಬರ ಮೇಲೆ ಬಿದ್ದಿದೆ ಈ ವೇಳೆ ವಿದ್ಯುತ್ ಶಾಕ್ ಗೆ ಒಳಗಾದ ವ್ಯಕ್ತಿಯನ್ನು ರಕ್ಷಿಸಲು ತೆರಳಿದ ಇನ್ನೊಬ್ಬರು ಕೂಡ ಆಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ.

ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ.

Leave a Reply

You May Have Missed

error: Content is protected !!