ನೆಲ್ಯಾಡಿ ಬೆಥನಿ ಪದವಿ ಪೂರ್ವ ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಸಭೆ ಹಾಗೂ ಪದಾಧಿಕಾರಿಗಳ ಆಯ್ಕೆ

ನೆಲ್ಯಾಡಿ: ನೆಲ್ಯಾಡಿ ಬೆಥನಿ ಪದವಿ ಪೂರ್ವ ಕಾಲೇಜಿನ 2024-26ನೇ ಸಾಲಿನ ಶಿಕ್ಷಕ ರಕ್ಷಕ ಸಂಘದ ಸಭೆ ಹಾಗೂ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮವು ಜುಲೈ 4ರಂದು ನಡೆಯಿತು.

ಸಂಸ್ಥೆಯ ಪ್ರಿನ್ಸಿಪಾಲ್ ಡಾ.ವರ್ಗೀಸ್ ಕೈಪನಡ್ಕ ಅವರ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳ ಪೋಷಕರು, ಶಿಕ್ಷಕರು ಹಾಗೂ ಸಂಸ್ಥೆಯವರ ನಡುವೆ ಪರಸ್ಪರ ಬಾಂಧವ್ಯತೆಯಿಂದ ಇರಬೇಕು. ವಿದ್ಯಾರ್ಥಿಗಳು ತಪ್ಪು ಮಾಡಿದ್ದಲ್ಲಿ ತಿದ್ದುವ ಕೆಲಸವನ್ನು ಪೋಷಕರು ಹಾಗೂ ಶಿಕ್ಷಕರು ಮಾಡುತ್ತಾರೆ. ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಶಿಸ್ತನ್ನು ಅಳವಡಿಸಿದಾಗ ಎಲ್ಲಾ ಪೋಷಕರು ಹಾಗೂ ಶಿಕ್ಷಕ ರಕ್ಷಕ ಸಂಘದವರು ಸಹಕಾರ ನೀಡಬೇಕು. ವಿದ್ಯಾರ್ಥಿಯಾದವನು ನಾಲ್ಕು ಕೋಣೆಗಳ ಮಧ್ಯೆ ಕುಳಿತು ಅಂಕಗಳಿಸುವುದು ಮಾತ್ರವಲ್ಲ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದು ಅತಿ ಮುಖ್ಯ ಎಂದರು.
ವೇದಿಕೆಯಲ್ಲಿ ಉಪಪ್ರಿನ್ಸಿಪಾಲ್ ಜೋಸ್.ಎಂ.ಜೆ, 2023-24ನೇ ಸಾಲಿನ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್ ಉಪಸ್ಥಿತರಿದ್ದರು.

ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಜಯಾನಂದ ಬಂಟ್ರಿಯಾಲ್, ಉಪಾಧ್ಯಕ್ಷರಾಗಿ ಸನ್ನಿ ಕೆ.ಎಸ್, ಕಾರ್ಯದರ್ಶಿಯಾಗಿ ಶಿಕ್ಷಕಿ ಎಲಿಸಬೆತ್.ಎನ್.ಪಿ, ಜೊತೆ ಕಾರ್ಯದರ್ಶಿಯಾಗಿ ಮೇರಿ ಸ್ಟೀಫನ್ ಆಯ್ಕೆಯಾದರು.
ಪೋಷಕ ಪ್ರತಿನಿಧಿಗಳು, ಶಿಕ್ಷಕರು ಪಾಲ್ಗೊಂಡರು. ಜೋಸ್ ಎಂ.ಜೆ ಸ್ವಾಗತಿಸಿದರು. ಎಲಿಸಬೆತ್.ಎನ್.ಪಿ ಕಾರ್ಯಕ್ರಮ ನಿರೂಪಿಸಿದರು.
























Leave a Reply