ದಕ್ಷಿಣ ಕನ್ನಡ ಜು.15 ರಂದು ರೆಡ್‌ ಅಲರ್ಟ್‌:ಅಂಗನವಾಡಿಯಿಂದ ಪಿಯು ತನಕ ರಜೆ ಘೋಷಣೆ

ದಕ್ಷಿಣ ಕನ್ನಡ ಜು.15 ರಂದು ರೆಡ್‌ ಅಲರ್ಟ್‌:ಅಂಗನವಾಡಿಯಿಂದ ಪಿಯು ತನಕ ರಜೆ ಘೋಷಣೆ

ಮಂಗಳೂರು ತಾಲೂಕಿನಲ್ಲಿ ಮಳೆ ಬಿರುಸು ಮುಂದುವರಿದಿದ್ದು, ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಎಲ್ಲ ಸರಕಾರಿ, ಅನುದಾನಿತ, ಅನುದಾನ ರಹಿತ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ಹಾಗೂ ಪಿಯು ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.

ಭಾರತೀಯ ಹವಾಮಾನ ಇಲಾಖೆ ಮತ್ತು ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಸೂಚನೆಯಂತೆ ಕರಾವಳಿ ಭಾಗದಲ್ಲಿ ಮಳೆ ಬಿರುಸಾಗಿದೆ. ಈ ಕಾರಣದಿಂದ ತಗ್ಗುಪ್ರದೇಶ, ನೆರೆ ನೀರು ತುಂಬುವ ತಗ್ಗು ಪ್ರದೇಶ ನದಿ, ಸಮುದ್ರ ತೀರ ಪ್ರದೇಶಕ್ಕೆ ಸಾರ್ವಜನಿಕರು, ಪ್ರವಾಸಿಗರು ತೆರಳುವಂತಿಲ್ಲ, ಮೀನುಗಾರಿಕೆಗೆ ಸಮುದ್ರಕ್ಕೆ ತೆರಳುವಂತಿಲ್ಲ, ವಿದ್ಯುತ್ ಕಂಬಗಳ ಬಳಿ ತೆರಳುವಂತಿಲ್ಲ, ಪ್ರಾಕೃತಿಕ ವಿಕೋಪದ ಸೂಚನೆ ಕಂಡು ಬಂದಲ್ಲಿ‌ ಕೂಡಲೇ ಸ್ಥಳೀಯಾಡತಕ್ಕೆ ಸೂಚನೆ ನೀಡಬೇಕು. ತುರ್ತು ಸೇವೆಗೆ ನಿಯಂತ್ಣ ಕೊಠಡಿ ಸಂಪರ್ಕಿಸಬೇಕೆಂದು ತಹಶೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

You May Have Missed

error: Content is protected !!