ಕಡಬ ಕ್ನಾನಾಯ ಜ್ಯೋತಿ ಶಾಲೆಯ 3 ವಿದ್ಯಾರ್ಥಿಗಳು ರಾಜ್ಯ ಮಟ್ಟದ ಮಿನಿ ಒಲಿಂಪಿಕ್ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆ

ಕಡಬ ಕ್ನಾನಾಯ ಜ್ಯೋತಿ ಶಾಲೆಯ 3 ವಿದ್ಯಾರ್ಥಿಗಳು ರಾಜ್ಯ ಮಟ್ಟದ ಮಿನಿ ಒಲಿಂಪಿಕ್ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆ

ಕಡಬ: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಜು.17ರಂದು ರಾಜ್ಯ ಮಟ್ಟದ ಮಿನಿ ಒಲಿಂಪಿಕ್ ಕಬಡ್ಡಿ ಪಂದ್ಯಾಟದ 8 ತಂಡಗಳ ಆಯ್ಕೆ ಪ್ರಕ್ರಿಯೆಯಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಸುಮಾರು 345 ವಿದ್ಯಾರ್ಥಿಗಳು ಭಾಗವಹಿಸಿದ್ದು ಅದರಲ್ಲಿ ಕಡಬದ ಕ್ನಾನಾಯ ಜ್ಯೋತಿ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿ ಪ್ರಜ್ಯೋತ್.ಎನ್.ಕೆ ಬೆಂಗಳೂರು ತಂಡವನ್ನು, ಆಸ್ಟಿನ್ ತೊಮಸ್ ದಕ್ಷಿಣ ಕನ್ನಡ ತಂಡವನ್ನು ಹಾಗು ಅಬ್ದುಲ್ ಶಾಮಿಕ್ ತುಮಕೂರು ತಂಡವನ್ನು ಪ್ರತಿನಿಧಿಸಲು ಆಯ್ಕೆಯಾಗಿರುತ್ತಾರೆ.

ಇವರಿಗೆ ಕಡಬದ ಕ್ನಾನಾಯ ಜ್ಯೋತಿ ಶಾಲೆಯ ದೈಹಿಕ ಶಿಕ್ಷಕ ಅಬ್ದುಲ್ ಖಾದರ್ ಮಾರ್ಗದರ್ಶನ ಮಾಡಿರುತ್ತಾರೆ.

Leave a Reply

You May Have Missed

error: Content is protected !!