ಶಿಶಿಲ ಕಪಿಲ ನದಿಯ ಕಿಂಡ ಅಣೆಕಟ್ಟಿನಲ್ಲಿ ಸಿಕ್ಕಿ ಹಾಕಿಕೊಂಡ ಮರಗಳ ತೆರವು ಕಾರ್ಯ

ಶಿಶಿಲ ಕಪಿಲ ನದಿಯ ಕಿಂಡ ಅಣೆಕಟ್ಟಿನಲ್ಲಿ ಸಿಕ್ಕಿ ಹಾಕಿಕೊಂಡ ಮರಗಳ ತೆರವು ಕಾರ್ಯ

ಕೊಕ್ಕಡ: ಕಪಿಲ ನದಿಯ ಕಿಂಡಿ ಅಣೆಕಟ್ಟಿನಲ್ಲಿ ಸಿಕ್ಕಿ ಹಾಕಿಕೊಂಡ ಮರಗಳ ತೆರವು ಕಾರ್ಯವನ್ನು ಜು.19ರಂದು ಮುಂಜಾನೆಯಿಂದ ಶಿಶಿಲ ಪಂಚಾಯತಿ ಮತ್ತು ದೇವಳದ ವತಿಯಿಂದ ನಡೆಸಲಾಗುತ್ತಿದೆ.

ನಿನ್ನೆಯಿಂದ ಸುರಿದ ಬಾರಿ ಮಳೆಗೆ ಕಪಿಲಾ ನದಿಯ ಕಿಂಡಿ ಅಣೆಕಟ್ಟಿನಲ್ಲಿ ದೊಡ್ಡ ದೊಡ್ಡ ಗಾತ್ರದ ಮರದ ದಿಮ್ಮಿಗಳು ಸಿಕ್ಕಿಹಾಕಿಕೊಂಡು ನೀರು ಸರಾಗವಾಗಿ ಹರಿಯಲು ಆಗದೆ ಪಕ್ಕದಲ್ಲಿರುವ ದೇವಸ್ಥಾನಕ್ಕೂ ನೀರು ನುಗ್ಗಿ ಸುತ್ತಮುತ್ತಲಿನ ಜನಗಳನ್ನು ಆತಂಕಕ್ಕೆ ಒಳಗಾಗಿಸಿತ್ತು. ಸಧ್ಯಕ್ಕೆ ತಕ್ಕ ಮಟ್ಟಿಗೆ ನೀರಿನ ಹರಿವು ಕಡಿಮೆ ಇದ್ದು ತೆರವು ಕಾರ್ಯಕ್ಕೆ ಎಡೆಮಾಡಿಕೊಟ್ಟಿದೆ ಈ ಕಾರ್ಯದಲ್ಲಿ ಪಂಚಾಯಿತಿ ನ ಅಧ್ಯಕ್ಷ ಸುಧಿನ್.ಡಿ ಹಾಗೂ ಗ್ರಾಮಸ್ಥರು ಸಹಕರಿಸುತ್ತಿದ್ದಾರೆ.

Leave a Reply

You May Have Missed

error: Content is protected !!