ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್ ನಲ್ಲಿ ನವದಿನಗಳ ಸಂತ ಅಲ್ಫೋನ್ಸ ಮಹೋತ್ಸವ ಪ್ರಾರಂಭ

ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್ ನಲ್ಲಿ ನವದಿನಗಳ ಸಂತ ಅಲ್ಫೋನ್ಸ ಮಹೋತ್ಸವ ಪ್ರಾರಂಭ

ನೆಲ್ಯಾಡಿ: ಬೆಳ್ತಂಗಡಿ ಧರ್ಮ ಪ್ರಾಂತ್ಯದ ಏಕೈಕ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರ ನೆಲ್ಯಾಡಿ ಯಲ್ಲಿ ನವದಿನಗಳ ಅಲ್ಫೋನ್ಸ ಮಹೋತ್ಸವಕ್ಕೆ ಜು.19ರಂದು ಶುಕ್ರವಾರ ವಂದನಿಯ ಫಾ ಎಬಿನ್ ಕುರಿಯನ್, ವಂದನಿಯ ಫಾ.ಶಾಜಿ ಮಾತ್ಯು ವಂದನಿಯ ಫಾ.ಜೇಮ್ಸ್ ಇವರ ನೇತೃತ್ವದಲ್ಲಿ ಧ್ವಜಾರೋಹಣದೊಂದಿಗೆ ಪ್ರಾರಂಬಿಸಲಾಯಿತು.

ಜಾತಿ, ಧರ್ಮ ಬೇದವಿಲ್ಲದೆ ಇಷ್ಟಾರ್ಥ ಸಿದ್ಧಿಗಾಗಿ ಈ ನವದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿದ ಪ್ರದೇಶಗಳಿಂದ ಭಕ್ತರು ಹರಕೆಯನ್ನಿಟ್ಟು ಪ್ರಾರ್ಥಿಸುವುದು ಇಲ್ಲಿನ ವಿಶೇಷ. ಜು.21ನೇ ಆದಿತ್ಯವಾರದಂದು ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಮಾರ್ ಲಾರೆನ್ಸ್ ಮುಕ್ಕುಯಿ, 26ನೇ ಶುಕ್ರವಾರದಂದು ಪುತ್ತೂರು ದರ್ಮಾಧ್ಯಕ್ಷರಾದ ಪರಮ ಪೂಜ್ಯ ಗೀವರ್ಗೀಸ್ ಮಾರ್ ಮಕ್ಕಾರಿಯೋಸ್ ಪೂಜಾ ವಿಧಿಗಳಿಗೆ ನೇತೃತ್ವ ನೀಡಲಿದ್ದಾರೆ. ಹಬ್ಬದ ದಿನಗಳಲ್ಲಿ ವಿವಿಧ ಕ್ರೈಸ್ತ ಪಂಗಡಗಳ ಪ್ರಾರ್ಥನೆ ನಡೆಯಲಿದೆ.

Leave a Reply

You May Have Missed

error: Content is protected !!