ಪರವಾನಿಗೆ ಇಲ್ಲದೆ ಮರದ ದಿಮ್ಮಿಗಳ ಸಾಗಾಟ ; ಲಾರಿ ಚಾಲಕನ ಬಂಧನ- ಮರದ ದಿಮ್ಮಿ, ಲಾರಿ ವಶ

ಪರವಾನಿಗೆ ಇಲ್ಲದೆ ಮರದ ದಿಮ್ಮಿಗಳ ಸಾಗಾಟ ; ಲಾರಿ ಚಾಲಕನ ಬಂಧನ- ಮರದ ದಿಮ್ಮಿ, ಲಾರಿ ವಶ

ನೆಲ್ಯಾಡಿ: ಯಾವುದೇ ಪರವಾನಿಗೆ ಇಲ್ಲದೇ ಕಲ್ಬಾಗೆ ಜಾತಿಯ ಮರದ ದಿಮ್ಮಿಗಳನ್ನು ಸಾಗಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಉಪ್ಪಿನಂಗಡಿ ಸಮೀಪದ ಮಠದಲ್ಲಿ ಪತ್ತೆಹಚ್ಚಿರುವ ಉಪ್ಪಿನಂಗಡಿ ಅರಣ್ಯ ಇಲಾಖಾಧಿಕಾರಿಗಳ ತಂಡ ಆರೋಪಿಯನ್ನು ಬಂಧಿಸಿ ಲಾರಿ ಹಾಗೂ ಮರದ ದಿಮ್ಮಿ ವಶಪಡಿಸಿಕೊಂಡಿದೆ.

ಸುಳ್ಯ ತಾಲೂಕು ಅಲೆಟ್ಟಿ ನಿವಾಸಿ ನಿಖಿಲ್ ಸಂಗಮ್(26ವ.)ಬಂಧಿತ ಲಾರಿ ಚಾಲಕ. ಈತ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಮೂಲಕ ಲಾರಿಯೊಂದರಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಮಂಗಳೂರು ಕಡೆಗೆ ಕಲ್ಬಾಗೆ ಜಾತಿಯ ಮರದ ದಿಮ್ಮಿಗಳನ್ನು ಸಾಗಾಟ ಮಾಡುತ್ತಿರುವುದನ್ನು ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಪತ್ತೆಹಚ್ಚಿದೆ. ಲಾರಿ ಹಾಗೂ ಸುಮಾರು 23 ಕಲ್ಬಾಗೆ ಮರದ ದಿಮ್ಮಿ ವಶಪಡಿಸಿಕೊಂಡಿರುವ ಅರಣ್ಯ ಇಲಾಖಾಧಿಕಾರಿಗಳ ತಂಡ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಪತ್ತೆ ಕಾರ್ಯಾಚರಣೆಯಲ್ಲಿ ಉಪ್ಪಿನಂಗಡಿ ಆರ್‌ಎಫ್‌ಒ ಜಯಪ್ರಕಾಶ್ ಕೆ.ಕೆ., ಡಿಆರ್‌ಎಫ್‌ಒ ಭವಾನಿಶಂಕರ್, ಫಾರೆಸ್ಟರ್ ವಿನಯ್‌ಚಂದ್ರ, ತೇಜಕುಮಾರ್ ಹಾಗೂ ಚಾಲಕ ಕಿಶೋರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Leave a Reply

You May Have Missed

error: Content is protected !!