ಮಹಿಳೆ ತೋಟದಲ್ಲಿ ಕುಸಿದು ಬಿದ್ದು ಮೃತ್ಯು

ಮಹಿಳೆ ತೋಟದಲ್ಲಿ ಕುಸಿದು ಬಿದ್ದು ಮೃತ್ಯು

ತೋಟದಲ್ಲಿ ಹುಲ್ಲು ತೆಗೆಯುತ್ತಿದ್ದಾಗ ಕುಸಿದು ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಪಾಲ್ತಾಡಿ ಗ್ರಾಮದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಚೆನ್ನಾವರ ನಿವಾಸಿ ದಿ.ಸುಬ್ಬಣ್ಣ ನಾಯ್ಕ ಎಂಬವರ ಪತ್ನಿ ಸೀತಾ ಕುಸಿದು ಬಿದ್ದು ಮೃತಪಟ್ಟ ಮಹಿಳೆ.

ಜು.23ರಂದು ಪಾಲ್ತಾಡಿ ಗ್ರಾಮದ ಚೆನ್ನಾವರದಲ್ಲಿ ತೋಟವೊಂದರಲ್ಲಿ ಹುಲ್ಲು ತೆಗೆಯುತ್ತಿದ್ದಾಗ ಸೀತಾ ಕುಸಿದು ಬಿದ್ದಿದ್ದು,ಕೂಡಲೇ ಅವರನ್ನು ಸ್ಥಳೀಯ ಕ್ಲಿನಿಕ್ ಗೆ ಕರೆದುಕೊಂಡು ಹೋಗಲಾಯಿತ್ತಾದರೂ ಅದಾಗಲೇ ಅವರು ಮೃತಪಟ್ಟಿದ್ದರು ಎನ್ನಲಾಗಿದೆ.

ಮೃತರು ಎರಡು ಗಂಡು, ಎರಡು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

Leave a Reply

You May Have Missed

error: Content is protected !!