ಉಪನ್ಯಾಸಕ ಜೇಸಿ ಮೋಹನ್ ಚಂದ್ರ ಅವರಿಗೆ ಜೇಸಿಐ ಸಾಧನಾಶ್ರೀ ಪ್ರಶಸ್ತಿ

ಉಪನ್ಯಾಸಕ ಜೇಸಿ ಮೋಹನ್ ಚಂದ್ರ ಅವರಿಗೆ ಜೇಸಿಐ ಸಾಧನಾಶ್ರೀ ಪ್ರಶಸ್ತಿ

ಉಪ್ಪಿನಂಗಡಿ: ಜೇಸಿಐ ಮಂಗಳೂರು ಶ್ರೇಷ್ಠ ಘಟಕದ ಆತಿಥ್ಯದಲ್ಲಿ ಜೇಸಿಐ ಭಾರತದ ವಲಯ ಹದಿನೈದರ ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗ ಮತ್ತು ವ್ಯವಹಾರ ವಿಭಾಗದ ವೈಭವ- 2024 ಸಾಧಕ ಜೇಸಿಗಳ ಸಮಾಗಮ ಸಮ್ಮೇಳನದಲ್ಲಿ ವೃತ್ತಿ ಮತ್ತು ವ್ಯವಹಾರದಲ್ಲಿ ಅತ್ಯುತ್ತಮ ಸಾಧನೆ ಗೈದ ಸಾಧಕರಿಗೆ ಕೊಡ ಮಾಡುವ ಸಾಧನಾಶ್ರೀ ಪ್ರಶಸ್ತಿಯನ್ನು ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಮತ್ತು ಉಪ್ಪಿನಂಗಡಿ ಘಟಕದ 2022ರ ಸಾಲಿನ ಅಧ್ಯಕ್ಷ ಮತ್ತು 2023ರ ಸಾಲಿನ ವಲಯದ ಉದಕ ಪತ್ರಿಕೆಯ ಸಂಪಾದಕ ಜೇಸಿ ಮೋಹನ್ ಚಂದ್ರ ತೋಟದ ಮನೆ ಅವರಿಗೆ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ವಲಯಾಧ್ಯಕ್ಷ ಜೇಸಿ ಸೆನೆಟರ್ ಅಡ್ವೋಕೇಟ್ ಗಿರೀಶ್ ಎಸ್.ಪಿ., ವಲಯ ಉಪಾಧ್ಯಕ್ಷ ಜೇಸಿ ದೀಪಕ್ ರಾಜ್, ಪೂರ್ವಾ ವಲಯಾಧ್ಯಕ್ಷ ಮುರಲಿ ಶ್ಯಾಂ ಮತ್ತು ವಲಯ ನಿರ್ದೇಶಕ ಜೇಸಿ ರವಿಚಂದ್ರ ಪಾಟಾಳಿ ಮತ್ತು ಜೇಸಿ ಸುನಿಲ್ ಕುಮಾರ್ ಮತ್ತು ಘಟಕದ ಅಧ್ಯಕ್ಷೆ ಲವೀನಾ ಪಿಂಟೊ ಮತ್ತು ಕಾರ್ಯದರ್ಶಿ ಸುರೇಶ್ ಉಪಸ್ಥಿತರಿದ್ದರು.

Leave a Reply

You May Have Missed

error: Content is protected !!