ಪಬ್‌ಜಿ ಆಟದ ಅಭ್ಯಾಸವಿದ್ದ ಯುವತಿಯೋರ್ವಳು ನಾಪತ್ತೆ

ಪಬ್‌ಜಿ ಆಟದ ಅಭ್ಯಾಸವಿದ್ದ ಯುವತಿಯೋರ್ವಳು ನಾಪತ್ತೆ

ಮೊಬೈಲ್‌ನಲ್ಲಿ ಪಬ್‌ಜಿ ಆನ್‌ಲೈನ್‌ ಆಟವಾಡುವ ಹವ್ಯಾಸವಿದ್ದ ನಗರದ ಬಿಜೈಯ ಯುವತಿಯೋರ್ವಳು ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.

ಕೆಲಿಸ್ತಾ ಫೆರಾವೊ(18) ನಾಪತ್ತೆಯಾದವರು. ಎಸೆಸೆಲ್ಸಿ ಬಳಿಕ ಆಟೊಮೊಬೈಲ್‌ ಕೋರ್ಸ್‌ಗೆ ಸೇರ್ಪಡೆಗೊಂಡಿದ್ದ ಈಕೆ ಮಂಗಳವಾರ ಮಧ್ಯಾಹ್ನ 12.15ರ ಸುಮಾರಿಗೆ ಮನೆಯಿಂದ ಹೊರಗೆ ಹೋಗಿದ್ದಳು. ಇದು ಮನೆಯವರ ಗಮನಕ್ಕೆ ಬಂದ ಕೂಡಲೇ ಅವರು ಹುಡುಕಾಟ ಆರಂಭಿಸಿದರು. ಸಿಸಿ ಕೆಮರಾವೊಂದನ್ನು ಪರಿಶೀಲಿಸಿದಾಗ ಈಕೆ ಆಟೋರಿಕ್ಷಾದಲ್ಲಿ ಹೋಗುತ್ತಿರುವ ದೃಶ್ಯ ದಾಖಲಾಗಿತ್ತು.

ಕೆಲಿಸ್ತಾ ಕನ್ನಡ, ತುಳು, ಇಂಗ್ಲಿಷ್‌, ಕೊಂಕಣಿ ಭಾಷೆಗಳನ್ನು ಮಾತನಾಡುತ್ತಾಳೆ. ಬಿಳಿ ಟಾಪ್‌ ಮತ್ತು ನೀಲಿ ಜೀನ್ಸ್‌ ಪ್ಯಾಂಟ್‌ ಧರಿಸಿದ್ದಳು. ಮಾಹಿತಿ ದೊರೆತವರು ಬರ್ಕೆ ಪೊಲೀಸ್‌ ಠಾಣೆ (0824-2220522) ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.

ಈಕೆಗೆ ಪಬ್‌ಜೀ ಗೇಮ್‌ನ ಅಭ್ಯಾಸವಿತ್ತು. ಈಕೆ 9ನೇ ತರಗತಿಯಲ್ಲಿದ್ದಾಗಲೂ ಪಬ್‌ಜಿ ಆಡುತ್ತಿದ್ದಳು. ಶಾಲೆಯಿಂದ ಮನೆಗೆ ಬಂದ ಮೇಲೆ ವೈಫೈ ಮೂಲಕ ಮನೆಯ ಮೊಬೈಲ್‌ನಲ್ಲಿ ಪಬ್‌ಜಿ ಆಡುತ್ತಿದ್ದಳು. ಈ ಬಗ್ಗೆ ಹೆತ್ತವರು ಹಲವಾರು ಬಾರಿ ಎಚ್ಚರಿಕೆ ನೀಡಿದ್ದರು. ಇದೇ ವಿಚಾರವಾಗಿ ಹಿಂದೊಮ್ಮೆ ಗಲಾಟೆ ಕೂಡ ನಡೆದಿತ್ತು. ಇತ್ತೀಚೆಗೆ ಮನೆಯವರು ಈಕೆಗೆ ಮೊಬೈಲ್‌ ಕೊಡಲು ನಿರ್ಧರಿಸಿ ಸಿಮ್‌ ಖರೀದಿಸಿದ್ದರು ಎಂದು ತಿಳಿದುಬಂದಿದೆ.

ಕೆಲಿಸ್ತಾಳ ಹುಡುಕಾಟದಲ್ಲಿ ತೊಡಗಿದ್ದ ಆಕೆಯ ತಂದೆ ಕೆನ್ಯೂಟ್‌ ಫೆರಾವೊ ಅವರಿಗೆ ಮಂಗಳವಾರ ಮಧ್ಯಾಹ್ನ ಬಿಜೈ ಚರ್ಚ್‌ ಬಳಿ ಕಾರೊಂದು ಢಿಕ್ಕಿ ಹೊಡೆದು ಅವರು ಗಂಭೀರವಾಗಿ ಗಾಯಗೊಂಡು ನಗರದ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Leave a Reply

You May Have Missed

error: Content is protected !!