ಕೌಕ್ರಾಡಿ: ಕಾಪಿನಬಾಗಿಲು- ಕಂಚಿನಡ್ಕ ರಸ್ತೆಯ ಬಳಿ ಆನೆ ಕಂದಕ ಕುಸಿತ

ಕೌಕ್ರಾಡಿ: ಕಾಪಿನಬಾಗಿಲು- ಕಂಚಿನಡ್ಕ ರಸ್ತೆಯ ಬಳಿ ಆನೆ ಕಂದಕ ಕುಸಿತ

ಕೊಕ್ಕಡ: ವಿಪರೀತ ಸುರಿದ ಗಾಳಿ ಮಳೆಗೆ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು- ಕಂಚಿನಡ್ಕ ರಸ್ತೆಯ ಬಳಿ ಆನೆ ಕಂದಕ ಕುಸಿತ.

ಅರಣ್ಯ ಇಲಾಖೆಯವರು ಆನೆಯ ಉಪಟಳವನ್ನು ಕಡಿವಾಣ ಹಾಕುವ ದೃಷ್ಟಿಯಲ್ಲಿ ಕಾಪಿನಬಾಗಿಲು-ಕಂಚಿನಡ್ಕ ರಸ್ತೆಯ ಬಳಿ ಆನೆ ಕಂದಕ ನಿರ್ಮಿಸಿದ್ದು. ಇದು ಅವೈಜ್ಞಾನಿಕವಾಗಿದ್ದು ಹರಿಯುವ ನೀರಿಗೆ ಅಡ್ಡಲಾಗಿ ನಿರ್ಮಿಸಲಾಗಿತ್ತು. ಸ್ಥಳೀಯರು ಆರಂಭದಲ್ಲಿ ನೀರು ಹರಿದು ಹೋಗಲು ಮೋರಿ ನಿರ್ಮಿಸುವಂತೆ ತಿಳಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ ಇದ್ದ ಪರಿಣಾಮ ಕಂದಕ ಕುಸಿಯಲು ಕಾರಣ ಎಂದು ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

You May Have Missed

error: Content is protected !!