ಶಿಬರಾಜೆ: ವಳಗುಡ್ಡೆ ತೋಟಕ್ಕೆ ಆನೆ ದಾಳಿ; ಕೃಷಿ ನಾಶ

ಶಿಬರಾಜೆ: ವಳಗುಡ್ಡೆ ತೋಟಕ್ಕೆ ಆನೆ ದಾಳಿ; ಕೃಷಿ ನಾಶ

ಕೊಕ್ಕಡ: ಶಿಬರಾಜೆಯ ವಳಗುಡ್ಡೆ ಕೇಶವ ಗೌಡ ಎಂಬುವರ ಕೃಷಿ ತೋಟಕ್ಕೆ ಆ.3ರಂದು ತಡರಾತ್ರಿ ಆನೆ ದಾಳಿ.

ಆನೆ ದಾಳಿಯಿಂದಾಗಿ ಸುಮಾರು 20ಕ್ಕೂ ಹೆಚ್ಚು ಅಡಿಕೆ ಮರಗಳು, ಬಾಳೆ ಗಿಡಗಳು ಹಾಗೂ ಕೃಷಿ ಪರಿಕರಗಳಾದ ಪೈಪ್ ಗಳು ಸೇರಿ ಅಪಾರ ಪ್ರಮಾಣದ ಕೃಷಿ ನಾಶವಾಗಿದೆ. ಇದರಿಂದಾಗಿ ರೈತರು ಕಂಗಲಾಗಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ರೈತರಿಗೆ ಆದ ನಷ್ಟಕ್ಕೆ ಸೂಕ್ತ ಪರಿಹಾರವನ್ನು ಒದಗಿಸಿಕೊಡಬೇಕಾಗಿ ವಿನಂತಿಸಿಕೊಂಡಿದ್ದಾರೆ.

Leave a Reply

You May Have Missed

error: Content is protected !!