ವಾಟ್ಸಪ್ ಮೂಲಕ ನಗ್ನ ಫೋಟೋ ಹಂಚಿಕೆ ದೂರು ದಾಖಲು

ವಾಟ್ಸಪ್ ಮೂಲಕ ನಗ್ನ ಫೋಟೋ ಹಂಚಿಕೆ ದೂರು ದಾಖಲು

ಬೆಳ್ತಂಗಡಿ ತಾಲೂಕಿನ‌ ವೇಣೂರು ಠಾಣಾವ್ಯಾಪ್ತಿಯ ಬಾಲಕಿಯೊಬ್ಬಳ ನಗ್ನ ಫೋಟೋಗಳನ್ನು ಪಡೆದುಕೊಂಡು ಅದನ್ನು ವಾಟ್ಸಪ್ ಮೂಲಕ ಹಂಚಿ ಬಾಲಕಿಯ ಮಾನಕ್ಕೆ ಕುಂದುಂಟುಮಾಡಿದ‌ ಬಗ್ಗೆ ಸವಣಾಲು ನಿವಾಸಿ ನಾಗೇಶ್ ಎಂಬಾತನ ವಿರುದ್ದ ವೇಣೂರು ಠಾಣೆಯಲ್ಲಿ ಪ್ರಕರಣ‌ ದಾಖಲಿಸಲಾಗಿದೆ.

ಸವಣಾಲು ನಿವಾಸಿಯಾಗಿರುವ ನಾಗೇಶ್ ಎಂಬಾತ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಸ್ನಾಪ್ ಚಾಟ್ ಮೂಲಕ ನಿರಂತರವಾಗಿ ಚಾಟಿಂಗ್ ಮಾಡುತ್ತಿದ್ದ ಮೊಬೈಲ್ ಮೂಲಕ ಆತ ಬಾಲಕಿಯ ನಗ್ನ ಫೋಟೋ ಳನ್ನು ವಾಟ್ಸಪ್ ನಲ್ಲಿ ಪಡೆದುಕೊಂಡಿದ್ದಾನೆ. ಇದಾದ ಬಳಿಕ ಆತ ಆಕೆಯನ್ನು ಸಂಶಯದಿಂದ ನೋಡಲಾರಂಭಿಸಿದ ಇದರಿಂದ ನೊಂದ ಬಾಲಕಿ ಆತನೊಂದಿಗೆ ಸಂಪರ್ಕ ಕಡಿದುಕೊಳ್ಳುವ ಪ್ರಯತ್ನ ಮಾಡಿದ್ದಳು. ಆತ ಬಾಲಕಿಯ ನಗ್ನ ಫೋಟೋಗಳನ್ನು ಎಲ್ಲರಿಗೂ ಹಂಚುವುದಾಗಿ ಬೆದರಿಸಿದ್ದ. ಅದನ್ನು ಹಂಚದಿರುವಂತೆ ವಿನಂತಿಸಿದಾಗ ಹಣಕ್ಕೆ ಬೇಡಿಕೆ ಇಟ್ಟಿದ್ದ ಅದನ್ನು ನೀಡದಿದ್ದಾಗ ಆತ ಬಾಲಕಿಯ ನಗ್ನ ಫೋಟೋವನ್ನು ತನ್ನ ಗೆಳೆಯರಿಗೆ ಹಂಚಿಕೆ ಮಾಡಿದ್ದು ಅದನ್ನು ಎಲ್ಲೆಡೆ ವೈರಲ್ ಮಾಡುವ ಪ್ರಯತ್ನ ನಡೆಸಿರುವುದಾಗಿ ನೊಂದ ಬಾಲಕಿ ದೂರು ನೀಡಿದ್ದಾಳೆ. ಅದರಂತೆ ವೇಣೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

You May Have Missed

error: Content is protected !!