ಸುರ್ಯ ಸದಾಶಿವರುದ್ರ ದೇವಸ್ಥಾನಕ್ಕೆ ನಟ ಯಶ್, ರಾಧಿಕ ಭೇಟಿ

ಸುರ್ಯ ಸದಾಶಿವರುದ್ರ ದೇವಸ್ಥಾನಕ್ಕೆ ನಟ ಯಶ್, ರಾಧಿಕ ಭೇಟಿ

ರಾಕಿಂಗ್ ಸ್ಟಾರ್ ಯಶ್ ಅವರು ಕುಟುಂಬ ಸಮೇತರಾಗಿ ಮಂಗಳವಾರ ಬೆಳ್ತಂಗಡಿ ತಾಲೂಕಿನಲ್ಲಿರುವ ಮಣ್ಣಿನ ಹರಕೆಯಿಂದ ಪ್ರಸಿದ್ಧಿ ಪಡೆದಿರುವ ಸುರ್ಯ ಸದಾಶಿವರುದ್ರ ದೇವಸ್ಥಾನಕ್ಕೆ ಭೇಟಿ‌ ನೀಡಿದರು.

ಸಿನೆಮಾದ ಸಕ್ಸಸ್ ಗಾಗಿ ಈ ಹಿಂದೆ ಭೇಟಿ ನೀಡಿದ್ದ ಅವರು ಪತ್ನಿ ರಾಧಿಕಾ ಪಂಡಿತ್, ಮಕ್ಕಳೊಂದಿಗೆ ಬಂದು ದೇವರಿಗೆ ಕುಟುಂಬ ಹಾಗೂ ಸಿನೆಮಾ ರೀಲ್ ನ ಮಣ್ಣಿನ ಹರಕೆ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು.

ಈ ವೇಳೆ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರರಾದ ಸುರ್ಯ ಗುತ್ತು ಡಾ.ಸತೀಶ್ಚಂದ್ರ ಎಸ್. ಅವರು ದಂಪತಿಗಳನ್ನು ಕ್ಷೇತ್ರದ ವತಿಯಿಂದ ಗೌರವಿಸಿದರು.

ಪತ್ನಿ ರಾಧಿಕಾ ಪಂಡಿತ್. ಮಕ್ಕಳಾದ ಐರಾ ಹಾಗೂ ಯಥರ್ವ್ ಇದ್ದರು. ಚಲನಚಿತ್ರ ನಿರ್ಮಾಪಕ ವೆಂಕಟ್ ಜತೆಗಿದ್ದರು.

Leave a Reply

You May Have Missed

error: Content is protected !!