ಖಾರದ ಪುಡಿ ಎರಚಿ ಒಂಟಿ ಮಹಿಳೆಯ ದರೋಡೆ ಪ್ರಕರಣ; ದಕ್ಷಿಣ ಕನ್ನಡ, ಹಾಗೂ ಕೊಡಗಿನ ಆರೋಪಿಗಳ ಬಂಧನ

ಖಾರದ ಪುಡಿ ಎರಚಿ ಒಂಟಿ ಮಹಿಳೆಯ ದರೋಡೆ ಪ್ರಕರಣ; ದಕ್ಷಿಣ ಕನ್ನಡ, ಹಾಗೂ ಕೊಡಗಿನ ಆರೋಪಿಗಳ ಬಂಧನ

ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕಿಬ್ಬೆಟ್ಟ ಗ್ರಾಮದಲ್ಲಿ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು 7 ಆರೋಪಿಗಳನ್ನು ಬಂಧಿಸುವಲ್ಲಿ ಸೋಮವಾರಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಕುದುಮಾರು ಗ್ರಾಮದ ಕೆ.ರೋಷನ್(32), ಕನ್ಯಾನ ನಿವಾಸಿ ಸತೀಶ್ ರೈ(54), ಪಡೂರು ಗ್ರಾಮದ ಕೆ.ಗಣೇಶ(28), ವೀರಕೆಂಬ ಗ್ರಾಮದ ಕುಸುಮಕರ(39), ವಿರಾಜಪೇಟೆ ಶಿವಕೇರಿಯ ಸೂರ್ಯಪ್ರಸಾದ್ ಬಿ.ಎ(43), ಸೋಮವಾರಪೇಟೆ ವೆಂಕಟೇಶ್ವರ ಬ್ಲಾಕ್ ನಿವಾಸಿ ವಿನೋದ್ ಕುಮಾರ್ ಹೆಚ್.ಪಿ(36) ಹಾಗೂ ಕುಶಾಲನಗರ ತಾಲ್ಲೂಕು ಹೆಬ್ಬಾಲೆ ಗ್ರಾಮದ ಬಿ.ಮೋಹನ್ ಕುಮಾರ್(45) ಬಂಧಿತ ಆರೋಪಿಗಳಾಗಿದ್ದಾರೆ.

ಆರೋಪಿಗಳ ಬಳಿಯಿಂದ 3.2 ಲಕ್ಷ ರೂ. ನಗದು, ಕೃತ್ಯಕ್ಕೆ ಬಳಸಿದ್ದ 2 ಕಾರುಗಳು ಮತ್ತು 9 ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣದಲ್ಲಿ ಶಾಮೀಲಾದ ಇತರ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Previous post

ನೆಲ್ಯಾಡಿ ಮಂಗಳೂರು ವಿವಿ ಘಟಕ ಕಾಲೇಜು ಅನುಷ್ಠಾನ ಸಮಿತಿ ತುರ್ತು ಸಭೆ: ಪ್ರಥಮ ಬಿ.ಕಾಂ ಪದವಿ ತರಗತಿ ನಡೆಸುವ ಬಗ್ಗೆ ನಿರ್ಧಾರ

Next post

ಕಡಬ ಸೈoಟ್ ಆನ್ಸ್ ಶಾಲೆಯಲ್ಲಿ ಪಾಲಕರ ದಿನ ಹಾಗೂ ಗ್ರ್ಯಾಂಡ್ ಪೇರೆಂಟ್ಸ್ ಡೇ (ಅಜ್ಜ -ಅಜ್ಜಿಯಂದಿರ ದಿನ)

Leave a Reply

You May Have Missed

error: Content is protected !!