ಬೆಳ್ತಂಗಡಿ ಧರ್ಮಾಧ್ಯಕ್ಷರ ಪೀಠಾರೋಹಣ ವರ್ದಂತಿ: ನೆಲ್ಯಾಡಿ ಅಲ್ಫೋನ್ಸ ಚರ್ಚ್ ವತಿಯಿಂದ ಶುಭಾಶಯ

ಬೆಳ್ತಂಗಡಿ ಧರ್ಮಾಧ್ಯಕ್ಷರ ಪೀಠಾರೋಹಣ ವರ್ದಂತಿ: ನೆಲ್ಯಾಡಿ ಅಲ್ಫೋನ್ಸ ಚರ್ಚ್ ವತಿಯಿಂದ ಶುಭಾಶಯ

ಬೆಳ್ತಂಗಡಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ.ವಂ.ಪರಮಪೂಜ್ಯ ಲಾರೆನ್ಸ್ ಮುಕ್ಕುಯಿ ಅವರ ಪೀಠಾರೋಹಣ ವರ್ಧಂತಿ ಮತ್ತು ನಾಮಕರಣ ಹಬ್ಬದ ಶುಭಾಶಯಗಳನ್ನು ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್‌ನ ಟ್ರಸ್ಟಿಗಳು ಹಾಗೂ ಸೆಂಟ್ ಮೇರಿಸ್ ಚರ್ಚ್ ಆರ್ಲದ ಟ್ರಸ್ಟಿಗಳು ಧರ್ಮಾಧ್ಯಕ್ಷರ ನಿವಾಸದಲ್ಲಿ ಭೇಟಿಯಾಗಿ ಹಾರೈಸಿದರು.

ಈ ಸಂದರ್ಭದಲ್ಲಿ ಧರ್ಮಗುರುಗಳಾದ ವಂ.ಶಾಜಿ ಮಾತ್ಯು, ಸರ್ವರ ಪರವಾಗಿ, ಪೂಜ್ಯರಿಗೆ ಉತ್ತಮ ಆರೋಗ್ಯ ಮತ್ತು ಸಮೃದ್ಧಿಯನ್ನು ಹಾರೈಸಿದರು. ಚರ್ಚ್ ಸಹಾಯಕ ಧರ್ಮಗುರುಗಳಾದ ರೆ.ಫಾ.ಎಬಿನ್ ಕುರಿಯನ್, ನೆಲ್ಯಾಡಿ ಅಲ್ಫೋನ್ಸ ಚರ್ಚ್‌ನ ಟ್ರಸ್ಟಿಶಿಬು ಪನಚಿಕ್ಕಲ್, ಸಂಡೆ ಸ್ಕೂಲ್ ಮುಖ್ಯಶಿಕ್ಷಕ ರೊಯ್ ಕೊಳಂಗರಾತ್, ಆರ್ಲ ಚರ್ಚ್ ಸೆಂಟ್ ಮೇರಿಸ್ ಚರ್ಚ್‌ನ ಟ್ರಸ್ಟಿ ಸಂತೋಷ್ ಪುದುಮನ, ಮತ್ತು ಪಾಲನಾ ಸಮಿತಿಯ ರೆಜಿ ಕವಳಕಾಟ್ಟ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

You May Have Missed

error: Content is protected !!