ರಾಮನಗರ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ

ರಾಮನಗರ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ

ನೆಲ್ಯಾಡಿ: ರಾಮನಗರ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಸಂಘದ ನಿರ್ದೇಶಕಿ ಚಿತ್ರಾ ಹುಣ್ಸೆಬೆಟ್ಟು ಧ್ವಜಾರೋಹಣ ನೆರವೇರಿಸಿದರು. ಸಂಘದ ಅಧ್ಯಕ್ಷೆ ಆಶಾ ಜೋಗಿತ್ತಾಯ ಸ್ವಾಗತಿಸಿ ಶುಭಾಶಯ ಕೋರಿದರು.

ಗಂಗಾಧರ ಶೆಟ್ಟಿ ಅಮ್ಮೆತ್ತಿಮಾರ್ ಗುತ್ತು, ಧನಂಜಯ ಕೊಡಂಗೆ, ಸೀತಾರಾಮ ಕಾನಮನೆ ಸಂದರ್ಭೋಚಿತವಾಗಿ ಮಾತನಾಡಿದರು.

ಸಂಘದ ನಿರ್ದೇಶಕರುಗಳು, ಸಿಬ್ಬಂಧಿ ವರ್ಗದವರು, ಹೈನುಗಾರ ಬಂಧುಗಳು, ಊರಿನ ದೇಶಪ್ರೇಮಿಗಳು ಭಾಗವಹಿಸಿದ್ದರು. ವಂದೇ ಮಾತರಂ ಧ್ವಜಗೀತೆ ಹಾಗೂ ಜನ ಗಣ ಮನ ರಾಷ್ಟ್ರಗೀತೆಯನ್ನು ಸಾಮೂಹಿಕವಾಗಿ ಹಾಡಲಾಯಿತು. ಸಿಹಿ ತಿಂಡಿ ವಿತರಿಸಲಾಯಿತು. ಸಂಘದ ಕಾರ್ಯದರ್ಶಿ ಕಮಲ ವಂದಿಸಿದರು.

Leave a Reply

You May Have Missed

error: Content is protected !!